ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

US Open 2024 | ಹಾಲಿ ಚಾಂಪಿಯನ್ ಜೊಕೊವಿಚ್‌ ಶುಭಾರಂಭ

Published : 27 ಆಗಸ್ಟ್ 2024, 6:32 IST
Last Updated : 27 ಆಗಸ್ಟ್ 2024, 6:32 IST
ಫಾಲೋ ಮಾಡಿ
Comments

ನ್ಯೂಯಾರ್ಕ್: ಅಮೆರಿಕ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಹಾಲಿ ಚಾಂಪಿಯನ್, ಸರ್ಬಿಯಾದ ನೊವಾಕ್ ಜೊಕೊವಿಚ್, ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಎದುರು ನೋಡುತ್ತಿರುವ ಎರಡನೇ ಶ್ರೇಯಾಂಕಿತರಾಗಿರುವ ಚೊಕೊವಿಚ್, ಮೊದಲ ಸುತ್ತಿನಲ್ಲಿ ಮಾಲ್ಡೋವಾದ ರಾಡು ಅಲ್ಬೋಟ್ ವಿರುದ್ಧ 6-2, 6-2, 6-4ರ ಅಂತರದಲ್ಲಿ ಸುಲಭ ಗೆಲುವು ದಾಖಲಿಸಿದರು.

ಆ ಮೂಲಕ ಅರ್ಥರ್ ಆ್ಯಷ್ ಸ್ಟೇಡಿಯಂನಲ್ಲಿ ದಿಗ್ಗಜ ರೋಜರ್ ಫೆಡರರ್ ದಾಖಲೆ ಮುರಿದಿರುವ ಜೊಕೊವಿಚ್, ದಾಖಲೆಯ 78ನೇ ಜಯ ಗಳಿಸಿದರು.

ಮೊದಲ ದಿನ 74,641ಕ್ಕೂ ಅಧಿಕ ಅಭಿಮಾನಿಗಳು ಪಂದ್ಯ ವೀಕ್ಷಿಸಿದ್ದಾರೆ ಎಂದು ಅಮೆರಿಕ ಟೆನಿಸ್ ಸಂಸ್ಥೆ ತಿಳಿಸಿದೆ.

ಆಕ್ರಮಣಕಾರಿ ಆಟವಾಡಿದ ಜೊಕೊವಿಚ್, 'ಇಲ್ಲಿ ರಾತ್ರಿ ಆಡುವುದೇ ವಿಶ್ವದಲ್ಲೇ ಅತ್ಯುತ್ತಮ' ಎಂದು ಬಣ್ಣಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಬರ ಎದುರಿಸುತ್ತಿರುವ ಜೊಕೊವಿಚ್, ಮೊದಲ ಕಿರೀಟ ಎದುರು ನೋಡುತ್ತಿದ್ದಾರೆ. ಅಲ್ಲದೆ ಐದು ಬಾರಿ ಅಮೆರಿಕ ಓಪನ್ ಗೆದ್ದಿರುವ ಫೆಡರರ್ ದಾಖಲೆ ಸರಿಗಟ್ಟುವ ಇರಾದೆಯಲ್ಲಿದ್ದಾರೆ.

ಇತ್ತೀಚೆಗಷ್ಟೇ ಪ್ಯಾರಿಸ್ ಒಲಿಂಪಿಕ್ಸ್ ಟೆನಿಸ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ಪೇನ್‌ನ ಪ್ರತಿಭಾನ್ವಿತ ಕಾರ್ಲೋಸ್ ಅಲ್ಕರಾಜ್ ಅವರನ್ನು ಮಣಿಸಿದ್ದ ಜೊಕೊವಿಚ್, ಚಿನ್ನದ ಪದಕ ಜಯಿಸಿದ್ದರು. ಆ ಮೂಲಕ ವೃತ್ತಿ ಜೀವನದಲ್ಲಿ 'ಗೋಲ್ಡನ್ ಸ್ಲಾಮ್' ಸಾಧನೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT