ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಭಾರತ ತಂಡದಲ್ಲಿ ವೈದೇಹಿ, ಋತುಜಾಗೆ ಸ್ಥಾನ

ಬಿಲ್ಲಿ ಜೀನ್ ಕಿಂಗ್ ಕಪ್ ಟೆನಿಸ್‌: ಶಾಲಿನಿಗೆ ನಾಯಕತ್ವ
Last Updated 6 ಮಾರ್ಚ್ 2023, 19:45 IST
ಅಕ್ಷರ ಗಾತ್ರ

ನವದೆಹಲಿ: ಏಷ್ಯಾ ಒಷಾನಿಯಾ ಒಂದನೇ ಗುಂಪಿನ ಬಿಲ್ಲಿ ಜೀನ್ ಕಿಂಗ್‌ ಕಪ್ ಟೆನಿಸ್‌ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ವೈದೇಹಿ ಚೌಧರಿ ಅವರಿಗೆ ಸ್ಥಾನ ನೀಡಲಾಗಿದೆ.

ಏಷ್ಯಾ ಒಷಾನಿಯಾ ಒಂದನೇ ಗುಂಪಿನ ಪಂದ್ಯವು ಉಜ್ಬೆಕಿಸ್ತಾನದ ತಾಷ್ಕೆಂಟ್‌ನಲ್ಲಿ ಏಪ್ರಿಲ್ 10ರಿಂದ ನಡೆಯಲಿದೆ. ಅಂಕಿತಾ ರೈನಾ ಮತ್ತು ಕರ್ಮನ್ ಕೌರ್ ಥಂಡಿ ಪಂದ್ಯದಲ್ಲಿ ಆಡಲಿರುವ ಪ್ರಮುಖ ಆಟಗಾರ್ತಿಯರಾಗಿದ್ದಾರೆ.

ನಂದನ್ ಬಾಲ್ ಆಯ್ಕೆ ಮಾಡಿರುವ ತಂಡದಲ್ಲಿ, ಸಹಜಾ ಯಮಲಪಲ್ಲಿ ಮತ್ತು ಋತುಜಾ ಭೋಸ್ಲೆ ಅವರಿಗೂ ಸ್ಥಾನ ಸಿಕ್ಕಿದ್ದು, ರಿಯಾ ಭಾಟಿಯಾ ಅವರನ್ನು ಕೈಬಿಡಲಾಗಿದೆ.

ವಿಶಾಲ್ ಉಪ್ಪಳ ಬದಲಿಗೆ ಶಾಲಿನಿ ಠಾಕೂರ್ ಚಾವ್ಲಾ ಅವರಿಗೆ ತಂಡದ ನಾಯಕತ್ವ ವಹಿಸಲಾಗಿದೆ.

ಭಾರತ ತಂಡ: ಅಂಕಿತಾ ರೈನಾ, ಕರ್ಮನ್‌ಕೌರ್ ಥಂಡಿ, ಋತುಜಾ ಭೋಸ್ಲೆ, ಸಹಜಾ ಯಮಲಪಲ್ಲಿ ಮತ್ತು ವೈದೇಹಿ ಚೌಧರಿ. ಕಾಯ್ದಿರಿಸಿದ ಆಟಗಾರ್ತಿ: ಶ್ರೀವಲ್ಲಿ ಭಾಮಿದಿಪಾಟಿ. ನಾಯಕಿ: ಶಾಲಿನಿ ಠಾಕೂರ್ ಚಾವ್ಲಾ, ಕೋಚ್‌: ರಾಧಿಕಾ ಕಾನಿಟ್ಕರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT