ಶನಿವಾರ, ಏಪ್ರಿಲ್ 1, 2023
23 °C

Wimbledon 2021: ರೋಜರ್ ಫೆಡರರ್ 4ನೇ ಸುತ್ತಿಗೆ ಲಗ್ಗೆ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್: ಸ್ವಿಟ್ಜರ್‌ಲೆಂಡ್‌ನ ಶ್ರೇಷ್ಠ ಟೆನಿಸ್ ಆಟಗಾರ ರೋಜರ್ ಫೆಡರರ್, ಪ್ರತಿಷ್ಠಿತ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಪುರುಷ ಸಿಂಗಲ್ಸ್ ವಿಭಾಗದಲ್ಲಿ ಶನಿವಾರ ಸೆಂಟರ್ ಕೋರ್ಟ್‌ನಲ್ಲಿ ನಡೆದ ಮೂರನೇ ಸುತ್ತಿನ ಹೋರಾಟದಲ್ಲಿ ಫೆಡರರ್, ತನ್ನ ಎದುರಾಳಿ 29ನೇ ಶ್ರೇಯಾಂಕಿತ ಬ್ರಿಟನ್‌ನ ಕ್ಯಾಮರಾನ್ ನೊರಿ ವಿರುದ್ಧ 6-4 6-4 5-7 6-4ರ ಕಠಿಣ ಅಂತರದ ಗೆಲುವು ದಾಖಲಿಸಿ ಮುನ್ನಡೆದರು.

ಇದನ್ನೂ ಓದಿ: 

ಇದರೊಂದಿಗೆ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಬ್ರಿಟನ್ ಆಟಗಾರರ ಕನಸು ಭಗ್ನಗೊಂಡಿತ್ತು.

 

 

 

ಈ ಮೂಲಕ 39ರ ಹರೆಯದ ಫೆಡರರ್, ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ದಾಖಲೆಯ 18ನೇ ಬಾರಿಗೆ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ ಸಾಧನೆ ಮೆರೆದರು. ಒಟ್ಟಾರೆಯಾಗಿ ಗ್ರ್ಯಾನ್‌ಸ್ಲಾಮ್ ಇತಿಹಾಸದಲ್ಲಿ ದಾಖಲೆಯ 69ನೇ ಬಾರಿಗೆ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ.

 

ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಆರನೇ ಶ್ರೇಯಾಂಕವನ್ನು ಪಡೆದಿರುವ ಫೆಡರರ್, ದಾಖಲೆಯ 20ನೇ ಹಾಗೂ 9ನೇ ವಿಂಬಲ್ಡನ್ ಪ್ರಶಸ್ತಿಯ ಹುಡುಕಾಟದಲ್ಲಿದ್ದಾರೆ. 2017ರಲ್ಲಿ ಕೊನೆಯದಾಗಿ ಫೆಡರರ್ ವಿಂಬಲ್ಡನ್ ಪ್ರಶಸ್ತಿ ಮುಡಿಗೇರಿಸಿದ್ದರು.

ನಾಲ್ಕನೇ ಸುತ್ತಿನ ಹೋರಾಟದಲ್ಲಿ ಫೆಡರರ್ ಈಗ 23ನೇ ಶ್ರೇಯಾಂಕಿತ ಇಟಲಿಯ ಲಾರೆನ್ಸೊ ಸೊನೆಗೊ ಸವಾಲನ್ನು ಎದುರಿಸಲಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು