ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Fact Check: ಪಾಕ್ ಕ್ರಿಕೆಟಿಗರಿಗಾಗಿ ವಿರಾಟ್ ಕೊಹ್ಲಿ ಪಾರ್ಟಿ ಆಯೋಜಿಸಿರಲಿಲ್ಲ

Published 9 ಅಕ್ಟೋಬರ್ 2023, 9:56 IST
Last Updated 9 ಅಕ್ಟೋಬರ್ 2023, 9:56 IST
ಅಕ್ಷರ ಗಾತ್ರ

ಭಾರತ ಕ್ರಿಕೆಟ್‌ ತಂಡದ ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರು ಪಾಕಿಸ್ತಾನ ಆಟಗಾರರಿಗಾಗಿ ತಮ್ಮ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದರೇ?

– ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಂಡ ಭಾರತಕ್ಕೆ ಆಗಮಿಸಿರುವ ಬೆನ್ನಲ್ಲೇ ಹೀಗೊಂದು ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಎಕ್ಸ್‌ನಲ್ಲಿ (ಟ್ವಿಟರ್‌) ವಿರಾಟ್‌ ಕೊಹ್ಲಿ ಹೆಸರಿನಲ್ಲಿ ಕ್ರಿಯೆಟ್ ಮಾಡಲಾಗಿರುವ ನಕಲಿ (@amiVkohli) ಖಾತೆಯಲ್ಲಿ, '7 ವರ್ಷಗಳ ದೀರ್ಘಾವಧಿಯ ಬಳಿಕ ನನ್ನ ದೇಶಕ್ಕೆ ಬಂದಿರುವ ಪಾಕಿಸ್ತಾನ ಕ್ರಿಕೆಟ್‌ ತಂಡವನ್ನು ಪ್ರೀತಿಯಿಂದ ಸ್ವಾಗತಿಸುತ್ತೇನೆ. ನನ್ನ ಸ್ನೇಹಿತರಿಗಾಗಿ, ವಿಶೇಷವಾಗಿ ಶಾದಾಬ್‌ಗಾಗಿ (ಪಾಕಿಸ್ತಾನ ತಂಡದ ಉಪನಾಯಕ) ನನ್ನ ಮನೆಯಲ್ಲಿ ಪಾರ್ಟಿ ಏರ್ಪಡಿಸುತ್ತೇನೆ. ಲವ್‌ ಯು ಆಲ್‌' ಎಂದು ಬರೆಯಲಾಗಿದೆ. ಪಾಕ್ ಕ್ರಿಕೆಟಿಗರು ಆಗಮಿಸುತ್ತಿರುವ ವಿಡಿಯೊವನ್ನೂ ಹಂಚಿಕೊಳ್ಳಲಾಗಿದೆ.

ಪಾಕ್‌ ತಂಡ ಹೈದರಾಬಾದ್‌ಗೆ ಬಂದಿಳಿದ ದಿನವೇ (ಸೆಪ್ಟೆಂಬರ್‌ 27ರಂದು) ಹಂಚಿಕೊಳ್ಳಲಾಗಿರುವ ಈ ಪೋಸ್ಟ್‌ ಸಾಕಷ್ಟು ಗೊಂದಲ ಸೃಷ್ಟಿಸಿದೆ. ಆದರೆ, ಇದು ನಿಜವಲ್ಲ. ವಿರಾಟ್‌ ಕೊಹ್ಲಿ ಅವರ ಅಧಿಕೃತ (@imVkohli) ಖಾತೆಯಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ವಿರಾಟ್‌ ಕೊಹ್ಲಿ ಅವರ ಅಧಿಕೃತ ಖಾತೆಯಲ್ಲಿ ಬಳಸಲಾಗಿರುವ ಪ್ರೊಫೈಲ್‌ ಚಿತ್ರ ಹಾಗೂ ಬಯೋವನ್ನು ನಕಲಿ ಖಾತೆಯಲ್ಲಿಯೂ ಹಾಕಿರುವುದರಿಂದ ಹೆಚ್ಚಿನವರು ಇದು ಸತ್ಯವೆಂದು ನಂಬಿದ್ದಾರೆ. ಕೆಲವರು ಕೊಹ್ಲಿ ಆಯೋಜಿಸುತ್ತಿದ್ದಾರೆ ಎನ್ನಲಾದ ಪಾರ್ಟಿಗೆ ಬೆಂಬಲ ವ್ಯಕ್ತಪಡಿಸಿದ್ದರೆ, ಹಲವರು ಟೀಕಿಸಿದ್ದಾರೆ.

ಭಾರತ, ಪಾಕಿಸ್ತಾನ ಶುಭಾರಂಭ
ಭಾರತ ಹಾಗೂ ಪಾಕಿಸ್ತಾನ ತಂಡಗಳು ವಿಶ್ವಕಪ್‌ ಟೂರ್ನಿಯಲ್ಲಿ ತಾವು ಆಡಿದ ಮೊದಲ ಪಂದ್ಯಗಳಲ್ಲಿ ಜಯ ಸಾಧಿಸುವುದರೊಂದಿಗೆ ಅಭಿಯಾನ ಆರಂಭಿಸಿವೆ.

ಪಾಕಿಸ್ತಾನ ತಂಡ ಅಕ್ಟೋಬರ್ 6ರಂದು ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 81 ರನ್‌ ಅಂತರದಿಂದ ಗೆಲುವು ಸಾಧಿಸಿದೆ. ಭಾರತ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8ರಂದು ನಡೆದ ಪಂದ್ಯದಲ್ಲಿ 6 ವಿಕೆಟ್‌ ಅಂತರದ ಜಯ ಸಾಧಿಸಿದೆ.

ಪಾಕಿಸ್ತಾನ ತಂಡ ತನ್ನ ಎರಡನೇ ಪಂದ್ಯದಲ್ಲಿ ನಾಳೆ (ಅ.10) ಶ್ರೀಲಂಕಾ ವಿರುದ್ಧ ಆಡಲಿದೆ. ಭಾರತ ಅ.11ರಂದು ಅಫ್ಗಾನಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT