ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs PAK: ಭಾರತ-ಪಾಕ್ ಪಂದ್ಯಕ್ಕೂ ಮುನ್ನ ಕೈಮುಗಿದು ಬೇಡಿಕೊಂಡ ಸೂರ್ಯಕುಮಾರ್!

Published 14 ಅಕ್ಟೋಬರ್ 2023, 4:12 IST
Last Updated 14 ಅಕ್ಟೋಬರ್ 2023, 4:12 IST
ಅಕ್ಷರ ಗಾತ್ರ

ಅಹಮದಾಬಾದ್: 'ದಯವಿಟ್ಟು ಇನ್ನೂ ಟಿಕೆಟ್ ಕೇಳಬೇಡಿ' - ಭಾರತ ಮತ್ತು ಪಾಕಿಸ್ತಾನ ನಡುವೆ ಏಕದಿನ ವಿಶ್ವಕಪ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರ ಸೂರ್ಯಕುಮಾರ್ ಕುಮಾರ್ ಬೇಡಿಕೊಂಡಿದ್ದು ಹೀಗೆ...

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ಇಂದು ಮಧ್ಯಾಹ್ನ ನಡೆಯಲಿದೆ.

ಸಹಜವಾಗಿಯೇ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದ್ದು, ಟಿಕೆಟ್ ಬೇಡಿಕೆಯೂ ಹೆಚ್ಚಿದೆ. ಅಧಿಕೃತ ಮೂಲಗಳ ಪ್ರಕಾರ ಟಿಕೆಟ್ ಎಲ್ಲವೂ ಸೋಲ್ಡ್ ಔಟ್ ಆಗಿದೆ.

ಇದರಿಂದಾಗಿ ಕ್ರಿಕೆಟ್ ಪ್ರೇಮಿಗಳು ಟಿಕೆಟ್‌ಗಾಗಿ ಆಟಗಾರರನ್ನು ಬೇಡಿಕೊಳ್ಳುವಂತಾಗಿದೆ. ಇದರಿಂದಾಗಿ ಬೇಸತ್ತಿರುವ ಸೂರ್ಯಕುಮಾರ್, ಕೊನೆಗೆ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ದಯವಿಟ್ಟು ಇನ್ನೂ ಟಿಕೆಟ್ ಕೇಳಬೇಡಿ ಎಂದು ವಿನಂತಿಸಿದ್ದಾರೆ.

ಎಲ್ಲರ ಮನೆಯಲ್ಲೂ ಒಳ್ಳೆ ಒಳ್ಳೆಯ ಟಿ.ವಿಗಳಿವೆ. ಮನೆಯಲ್ಲೇ ಎಸಿ ರೂಮ್‌ನಲ್ಲೇ ಕುಳಿತುಕೊಂಡು ಪಂದ್ಯ ಆನಂದಿಸುವಂತೆ ಸಲಹೆ ನೀಡಿದ್ದಾರೆ.

ಸಚಿನ್ ಶುಭಹಾರೈಕೆ...

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಟೀಮ್ ಇಂಡಿಯಾಕ್ಕೆ ಶುಭಹಾರೈಸಿದ್ದು, ಗೆಲುವು ದಾಖಲಿಸಲಿ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT