ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

IND vs BAN | ಶಕೀಬ್‌ ಅಲಭ್ಯ; ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ

Published : 19 ಅಕ್ಟೋಬರ್ 2023, 8:30 IST
Last Updated : 19 ಅಕ್ಟೋಬರ್ 2023, 8:30 IST
ಫಾಲೋ ಮಾಡಿ
Comments

ಪುಣೆ: ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ನಾಲ್ಕರ ಘಟ್ಟದ ಕನಸು ಉಳಿಯಬೇಕಾದರೆ ಗೆಲ್ಲಲೇಬೇಕಿರುವ ಬಾಂಗ್ಲಾದೇಶ ತಂಡ ಭಾರತದ ವಿರುದ್ಧ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂ.ಸಿ.ಎ) ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಂದ್ಯ ನಡೆಯುತ್ತಿದೆ.

ಸತತ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿರುವ ಟೀಂ ಇಂಡಿಯಾ, ಜಯದ ಓಟ ಮುಂದುವರಿಸುವ ತವಕದಲ್ಲಿದೆ.

ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಕಳೆದರೆಡು ಪಂದ್ಯಗಳಲ್ಲಿ ಅಬ್ಬರಿಸಿದ್ದಾರೆ. ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಶುಭಮನ್ ಗಿಲ್ ರೋಹಿತ್‌ಗೆ ಸಾಥ್‌ ನೀಡಲಿದ್ದಾರೆ. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್. ರಾಹುಲ್ ಅವರು ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ.

ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್‌ ಯಾದವ್ ಮತ್ತು ರವೀಂದ್ರ ಜಡೇಜ ಅವರನ್ನೊಳಗೊಂಡ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ಹಾಗಾಗಿ ಬಾಂಗ್ಲಾ ಪಡೆಗೆ ಈ ಪಂದ್ಯದಲ್ಲಿ ಹೇಗೆ ಆಡಲಿದೆ ಎಂಬುದನ್ನು ಕಾದುನೋಡಬೇಕಿದೆ.

ಭಾರತ ಹಾಗೂ ಬಾಂಗ್ಲದೇಶ ಕ್ರಿಕೆಟ್‌ ಅಭಿಮಾನಿಗಳು

ಭಾರತ ಹಾಗೂ ಬಾಂಗ್ಲದೇಶ ಕ್ರಿಕೆಟ್‌ ಅಭಿಮಾನಿಗಳು

ಪಿಟಿಐ ಚಿತ್ರ

ಶಕೀಬ್‌ ಅಲಭ್ಯ
ಅನುಭವಿ ಆಟಗಾರ, ನಾಯಕ ಶಕೀಬ್‌ ಅಲ್‌ ಹಸನ್‌ ಗಾಯಗೊಂಡಿದ್ದು, ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇದರಿಂದಾಗಿ ಬಾಂಗ್ಲಾ ಪಡೆಗೆ ಸಮರ್ಥ ಆಲ್‌ರೌಂಡರ್‌ ಕೊರತೆ ಕಾಡುವ ಸಾಧ್ಯತೆ ಇದೆ.

ಶಕೀಬ್‌ ಬದಲು ನಸುಮ್ ಅಹಮದ್‌ಗೆ ಸ್ಥಾನ ನೀಡಲಾಗಿದೆ. ನಜ್ಮುಲ್ ಹೊಸೇನ್ ಶಾಂತೊ ತಂಡ ಮುನ್ನಡೆಸಲಿದ್ದಾರೆ.

ಆಡುವ ಹನ್ನೊಂದರ ಬಳಗ
ಭಾರತ
: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್,

ಬಾಂಗ್ಲಾದೇಶ: ಲಿಟನ್ ದಾಸ್, ತಂಜೀಂ ಹಸನ್, ನಜ್ಮುಲ್ ಹೊಸೇನ್ ಶಾಂತೊ, ಮೆಹದಿ ಹಸನ್ ಮಿರಾಜ್, ತೌಹಿದ್ ಹೃದಯ್, ಮುಷ್ಫಿಕುರ್ ರಹೀಮ್, ಮೆಹಮುದುಲ್ಲಾ, ನಸುಮ್ ಅಹಮದ್, ಹಸನ್ ಮೆಹಮೂದ್, ಮುಸ್ತಫಿಜುರ್ ರೆಹಮಾನ್, ಶೊರಿಫುಲ್ ಇಸ್ಲಾಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT