ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Cup | ಭಾರತದ ಎದುರು ಆಸಿಸ್ ಬ್ಯಾಟರ್‌ಗಳು ಆಕ್ರಮಣಶೀಲರಾಗಬೇಕಿತ್ತು: ಫಿಂಚ್

’ಸ್ಪಿನ್ನರ್‌ಗಳಿಗೆ ಮೆರೆಯಲು ಅವಕಾಶ ನೀಡಿದ್ದು ಸರಿಯಲ್ಲ’
Published 9 ಅಕ್ಟೋಬರ್ 2023, 13:44 IST
Last Updated 9 ಅಕ್ಟೋಬರ್ 2023, 13:44 IST
ಅಕ್ಷರ ಗಾತ್ರ

ಚೆನ್ನೈ: ಭಾರತದ ವಿಶ್ವ ದರ್ಜೆಯ ಸ್ಪಿನ್ನರ್‌ಗಗಳ ಎದುರು ಆಸ್ಟ್ರೇಲಿಯಾದ ಬ್ಯಾಟರ್‌ಗಳು ಯೋಜನೆ ರೂಪಿಸಿದಂತೆ ಕಾಣಲಿಲ್ಲ. ಅವರು ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಲಿಲ್ಲ ಎಂದು ಆ ತಂಡದ ಮಾಜಿ ನಾಯಕ ಆ್ಯರನ್ ಫಿಂಚ್ ಹೇಳಿದ್ದಾರೆ. ಮುಂಚೂಣಿಯಲ್ಲಿ ಇರಬೇಕಾದರೆ ಆ ತಂಡ ಮನಸ್ಥಿತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಇಲ್ಲಿ ನಡೆದ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತದ ಸ್ಪಿನ್ನರ್‌ಗಳು, ಆರು ವಿಕೆಟ್‌ ಕಿತ್ತು ಆಸ್ಟ್ರೇಲಿಯಾ ತಂಡ 199 ರನ್‌ಗಳಿಗೆ ಸೀಮಿತಗೊಳ್ಳಲು ಕಾರಣರಾಗಿದ್ದರು.

ಸ್ಪಿನ್‌ ಸ್ನೇಹಿಯಾಗಿದ್ದ ಎಂ.ಎ.ಚಿದಂಬರಂ ಕ್ರೀಡಾಂಗಣದ ಪಿಚ್‌ನಲ್ಲಿ ಆಸ್ಟ್ರೇಲಿಯಾದ ಬ್ಯಾಟರ್‌ಗಳು ಅತೀವ ಎಚ್ಚರಿಕೆ ವಹಿಸಿ ಆಡಿದ್ದ ಕಾರಣ ಎದುರಾಳಿ ಸ್ಪಿನ್ನರ್‌ಗಳು ಹತೋಟಿ ಪಡೆಯಲು ಅವಕಾಶವಾಯಿತು ಎಂದು ಫಿಂಚ್ ಅಭಿಪ್ರಾಯಪಟ್ಟಿದ್ದಾರೆ.

‘ಜಡೇಜ, ಕುಲದೀಪ್ ಮತ್ತು ಅಶ್ವಿನ್‌ ಅವರಿಗೆ ನಿಯಂತ್ರಣ ಸಾಧಿಸಲು ಬಿಡಬಾರದಿತ್ತು. ಅವರು ಕರಾರುವಾಕ್ ಆಗಿ ಬೌಲಿಂಗ್ ಮಾಡಬಲ್ಲ ಜಾಣರು. ಜಡೇಜ ಈಗಾಗಲೇ ಹಲವು ಬಾರಿ ಆಸ್ಟ್ರೇಲಿಯಾ ಎದುರು ಈ ರೀತಿ ಯಶಸ್ಸು ಪಡೆದಿದ್ದಾರೆ’ ಎಂದು ಅವರು ಐಸಿಸಿಗೆ ಬರೆದ ಅಂಕಣದಲ್ಲಿ ವಿಶ್ಲೇಷಿಸಿದ್ದಾರೆ.

‘ಆಸ್ಟ್ರೇಲಿಯಾ ಕೂಡ ಸಾಕಷ್ಟು ಅವಕಾಶಗಳನ್ನು ಹೊಂದಿತ್ತು. ವಿರಾಟ್‌ ನೀಡಿದ್ದ ಕ್ಯಾಚ್ ಪಡೆದಿದ್ದರೆ ಪಂದ್ಯದ ಗತಿಯೇ ಬದಲಾಗುತಿತ್ತು’ ಎಂದು ಬರೆದಿದ್ದಾರೆ. ‘ವಿರಾಟ್‌, ಪ್ರೇಕ್ಷಕರಿಂದ ಬಲ ಪಡೆಯುತ್ತಾರೆ. ಕುದುರಿಕೊಂಡರೆ ಅವರನ್ನು ತಡೆಯಲಾಗದು. ಕೆ.ಎಲ್.ರಾಹುಲ್ ಅಧಿಕಾರಯುತ ಆಟವಾಡಿದರು’ ಎಂದೂ ಬರೆದಿದ್ದಾರೆ.

‌ಭಾರತದ ಪ್ರದರ್ಶನವನ್ನು ಫಿಂಚ್ ಕೊಂಡಾಡಿದರು. ‘ಭಾರತ ಸಮತೋಲನ ಹೊಂದಿರುವ ತಂಡ. ಮೂವರು ಅತ್ಯುತ್ತಮ ಸ್ಪಿನ್ನರ್‌ಗಳಿದ್ದಾರೆ. ಮೂವರು ನುರಿತ ವೇಗದ ಬೌಲರ್‌ಗಳಿದ್ದಾರೆ. ಅವರಿಗೆ ಬೆಂಬಲವಾಗಿ ಹಾರ್ದಿಕ್ ಪಾಂಡ್ಯ ಇದ್ದಾರೆ. ಇದು ತಂಡಕ್ಕೆ ಸಂತುಲನ ನೀಡಿದೆ. ಇಂಥ ಅನುಕೂಲಕರ ಪರಿಸ್ಥಿತಿಯಲ್ಲಿ ಅವರನ್ನು ಸೋಲಿಸುವುದು ಕಷ್ಟ’ ಎಂದೂ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT