ಬೆಂಗಳೂರು: ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ತಂಡದವರು ಭಾನುವಾರ ಇಲ್ಲಿ ನಡೆಯುವ ಐ ಲೀಗ್ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಮುಂಬೈ ಫುಟ್ಬಾಲ್ ಕ್ಲಬ್ ತಂಡದ ಸವಾಲನ್ನು ಎದುರಿಸಲಿದ್ದಾರೆ.

ಟೂರ್ನಿಯಲ್ಲಿ ಇನ್ನು ಕೇವಲ ಒಂಬತ್ತು ಪಂದ್ಯಗಳು ಮಾತ್ರ ಬಾಕಿ ಇವೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಬಿಎಫ್ಸಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಈ ಮೂಲಕ ಅಗ್ರಸ್ಥಾನ ಭದ್ರ ಪಡಿಸಿಕೊಳ್ಳುವುದು ತಂಡದ ಗುರಿ.

ಆ್ಯಶ್ಲೆ ವೆಸ್ಟ್ವುಡ್ ಗರಡಿಯಲ್ಲಿ ಪಳಗಿರುವ ಆತಿಥೇಯ ತಂಡದ ಆಟ ಗಾರರು ಟೂರ್ನಿಯ ಆರಂಭ ದಿಂದಲೂ ಗಮನಾರ್ಹ ಪ್ರದರ್ಶನ ತೋರುತ್ತಾ ಬಂದಿದ್ದಾರೆ. ಈ ಪಂದ್ಯದಲ್ಲೂ ಇದೇ ಆಟವನ್ನು ಪುನ ರಾವರ್ತಿಸುವ ಉತ್ಸಾಹದಲ್ಲಿದ್ದಾರೆ.

ಇನ್ನೊಂದೆಡೆ ಪಾಯಿಂಟ್ ಪಟ್ಟಿ ಯಲ್ಲಿ 10 ನೇ ಸ್ಥಾನ ಪಡೆದಿರುವ ಮುಂಬೈ ಕೂಡಾ ಜಯ ದಾಖಲಿಸುವ ಲೆಕ್ಕಾಚಾರದಲ್ಲಿದೆ. ಟೂರ್ನಿಯಲ್ಲಿ ಇದುವರೆಗೆ ಉತ್ತಮ ಪ್ರದರ್ಶನ ತೋರುವಲ್ಲಿ ಈ ತಂಡದ ಆಟಗಾರರು ವಿಫಲರಾಗಿದ್ದಾರೆ. ಉಭಯ ತಂಡಗಳ ಬಲಾಬಲವನ್ನು ಗಮನಿಸಿದರೆ ಬಿಎಫ್ಸಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.