ಪ್ರೇಯಸಿಯ ಇಷ್ಟದ ಬೈಕ್‌ಗಳನ್ನೇ ಕದಿಯುತ್ತಿದ್ದ!

7
ಕೋರಮಂಗಲ ಪೊಲೀಸರ ಬಲೆಗೆ ಬಿದ್ದ ಕುಖ್ಯಾತ ಕಳ್ಳ

ಪ್ರೇಯಸಿಯ ಇಷ್ಟದ ಬೈಕ್‌ಗಳನ್ನೇ ಕದಿಯುತ್ತಿದ್ದ!

Published:
Updated:
Prajavani

ಬೆಂಗಳೂರು: ಪ್ರೇಯಸಿ ಜತೆ ಸುತ್ತಾಟಕ್ಕೆ ಹೋಗುವ ಹಾಗೂ ಆಕೆ ಇಷ್ಟಪಟ್ಟಿದ್ದನ್ನು ಕೊಡಿಸುವ ಸಲುವಾಗಿ ದುಬಾರಿ ಮೌಲ್ಯದ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಹುಚ್ಚು ಪ್ರೇಮಿಯೊಬ್ಬನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

ಬೊಮ್ಮನಹಳ್ಳಿಯ ಕಾರ್ತಿಕ್ ಅಲಿಯಾಸ್ ಕಾಕಾ (26) ಎಂಬಾತನನ್ನು ಬಂಧಿಸಿ, ₹6 ಲಕ್ಷ ಮೌಲ್ಯದ ಹತ್ತು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ‘ನನ್ನ ಹುಡುಗಿಗೆ ಪಲ್ಸರ್ ಬೈಕ್ ಎಂದರೆ ಅಚ್ಚುಮೆಚ್ಚು. ಆಕೆಯನ್ನು ಖುಷಿಪಡಿ
ಸಲು ಬೈಕ್‌ಗಳನ್ನು ಕದ್ದು ಜಾಲಿರೈಡ್‌ಗೆ ಕರೆದುಕೊಂಡು ಹೋಗುತ್ತಿದ್ದೆ’ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾನೆ. ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 15 ವಾಹನಗಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

2018ರ ಅಕ್ಟೋಬರ್‌ನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದ ಕಾರ್ತಿಕ್, ಒಂದೂವರೆ ತಿಂಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

‘ಕೊರಿಯರ್ ಏಜೆನ್ಸಿಯಲ್ಲಿ ಕೆಲಸ ಮಾಡುವ ನಾನು ಬೈಕ್‌ ಪ್ರೇಮಿ. ನನ್ನ ಬಳಿ ದುಬಾರಿ ಬೆಲೆಯ ಆರು ಬೈಕ್‌ಗಳಿವೆ’ ಎಂದು ಪ್ರೇಯಸಿ ಬಳಿ ಸುಳ್ಳು ಹೇಳಿದ್ದ. ಆ ಮಾತುಗಳನ್ನು ನಂಬಿದ್ದ ಆಕೆ, ‘ನನ್ನನ್ನು ಆಗಾಗ್ಗೆ ಜಾಲಿರೈಡ್‌ಗೆ ಕರೆದುಕೊಂಡು ಹೋಗುತ್ತಿರಬೇಕು’ ಎಂಬ ಬೇಡಿಕೆ ಇಟ್ಟಿದ್ದಳು.

ಅದಕ್ಕೆ ಒಪ‍್ಪಿಕೊಂಡ ಕಾರ್ತಿಕ್, ‍ರಾತ್ರಿ ವೇಳೆ ಪ್ರತಿಷ್ಠಿತ ರಸ್ತೆಗಳಲ್ಲಿ ಪಲ್ಸರ್ ಬೈಕ್‌ಗಳನ್ನು ಕದಿಯಲು ಶುರು ಮಾಡಿದ್ದ. ಪ್ರತಿ ಬಾರಿಯೂ ಒಂದೊಂದು ಬೈಕ್‌ನಲ್ಲಿ ಪ್ರೇಯಸಿಯನ್ನು ಜಾಲಿರೈಡ್‌ಗೆ ಕರೆದುಕೊಂಡು ಹೋಗುತ್ತಿದ್ದ ಆತ, ಮರುದಿನವೇ ಆ ಬೈಕ್ ಮಾರಾಟ ಮಾಡಿ ಬಂದ ಹಣದಲ್ಲಿ ಪ್ರೇಯಸಿ ಜತೆ ಶಾಪಿಂಗ್ ಮಾಡುತ್ತಿದ್ದ. ಕಾರ್ತಿಕ್‌ನ ಕೃತ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ಸುಳಿವು ಆಧರಿಸಿ ಆರೋಪಿಯನ್ನು ಪತ್ತೆ ಮಾಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !