ಗುರುವಾರ , ಏಪ್ರಿಲ್ 2, 2020
19 °C

ದರ ಕುಸಿತ: 4 ಸಾವಿರ ಕೋಳಿಗಳ ಸಮಾಧಿ ಮಾಡಿದ ಮಾಲೀಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕೊರೊನಾ ವೈರಸ್ ಹರಡುವ ಭೀತಿಯಲ್ಲಿ ಕೋಳಿ ಮಾಂಸದ ದರ ಗಣನೀಯವಾಗಿ ಕುಸಿದ ಪರಿಣಾಮ ಬೇಸರಗೊಂಡ ಸಂತೇಕಡೂರಿನ ಫಾರಂ ಮಾಲೀಕ 4 ಸಾವಿರ ಕೋಳಿಮರಿಗಳನ್ನು ಬುಧವಾರ ಜೀವಂತ ಸಮಾಧಿ ಮಾಡಿದ್ದಾರೆ.

ಕೆ.ಜಿ. ಕೋಳಿ ಮಾಂಸಕ್ಕೆ ₹ 170 ಇದ್ದ ದರ ₹50 ಕ್ಕೆ ಕುಸಿದಿದೆ. ಇದರಿಂದ ಫಾರಂನಲ್ಲಿದ್ದ ಕೋಳಿ ಖರೀದಿಸುವವರೇ ಇಲ್ಲವಾಗಿದೆ. ಹಾಗಾಗಿ ಇಂತಹ ನಿರ್ಧಾರಕ್ಕೆ ಬರಬೇಕಾಯಿತು ಎಂದು ಮಾಲೀಕ ಶ್ರೀನಿವಾಸ್ ಮಾಹಿತಿ‌ ನೀಡಿದರು.

ಈಗಾಗಲೇ ₹ 2.5 ಲಕ್ಷ ಕಳೆದುಕೊಂಡಿದ್ದಾರೆ. ಮತ್ತೆ ಸಾಕಲು ಮುಂದಾದರೆ ಇನ್ನೂ ಹೆಚ್ಚು ನಷ್ಟ ಎಂದು ಫಾರಂನಲ್ಲೇ 12 ಅಡಿ ಗುಂಡಿ ತೋಡಿ 22 ದಿನಗಳ ಕೋಳಿಮರಿಗಳನ್ನ ಹೂತುಹಾಕಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು