ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆ: ಆಯುಕ್ತರಿಗೆ ದೂರು

Last Updated 11 ಮೇ 2019, 19:57 IST
ಅಕ್ಷರ ಗಾತ್ರ

ಬೆಂಗಳೂರು: ಸರ್ ಎಂ. ವಿಶ್ವೇಶ್ವರಯ್ಯನಗರದ ಒಂದನೇ ಬ್ಲಾಕ್‌ನಲ್ಲಿ ಒಳಚರಂಡಿ ಅವ್ಯವಸ್ಥೆ ಸೇರಿ 19 ಸಮಸ್ಯೆಗಳ ಪಟ್ಟಿಯನ್ನು ಇಲ್ಲಿನ ಸಿಟಿಜನ್ಸ್‌ ಫೋರಂನ ನಿಯೋಗವು ಬಿಡಿಎ ಆಯುಕ್ತ ಆಯುಕ್ತ ರಾಕೇಶ್‌ ಸಿಂಗ್ ಅವರಿಗೆ ಸಲ್ಲಿಸಿತು.

ಒಳಚರಂಡಿ ಅವ್ಯವಸ್ಥೆಯಿಂದ ಕೊಳಚೆ ನೀರು ಮಡುಗಟ್ಟಿ ನಿಂತಿದೆ. ಕಸಕಟ್ಟಿ, ತ್ಯಾಜ್ಯ ಅಲ್ಲಲ್ಲಿ ಗುಡ್ಡೆ ಬಿದ್ದು ದುರ್ವಾಸನೆ ಬೀರುತ್ತಿದೆ. ಇದರಿಂದಾಗಿ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಫೋರಂನ ಅಧ್ಯಕ್ಷ ಎನ್. ನಂಜೇಗೌಡ ನೇತೃತ್ವದ ನಿಯೋಗ ಹೇಳಿತು.

ರಸ್ತೆಗಳು ಗುಂಡಿ ಬಿದ್ದಿವೆ. ಇಕ್ಕೆಲಗಳಲ್ಲಿ ಅಳೆತ್ತರದ ಗಿಡಗಳು ಬೆಳೆದು ನಿಂತಿವೆ. ಹಾವು, ಚೇಳು ಮನೆಗಳಿಗೆ ನುಗ್ಗುತ್ತಿವೆ. ಉದ್ಯಾನಗಳು ಅಭಿವೃದ್ಧಿ ಕಂಡಿಲ್ಲ. ಅಡ್ಡರಸ್ತೆ, ಮುಖ್ಯರಸ್ತೆಗಳಿಗೆ ಸಂಖ್ಯೆ ನಮೂದಿಸದೆ ಇರುವ ಕಾರಣ ವಿಳಾಸ ಪತ್ತೆ ಹಚ್ಚಲು ಸಾಧ್ಯವಾಗತ್ತಿಲ್ಲ ಎಂದು ಸಮಸ್ಯೆಗಳನ್ನು ಚಿತ್ರಗಳ ಸಹಿತ ನಂಜೇಗೌಡ ವಿವರಿಸಿದರು.

‘ಹಣದ ಲಭ್ಯತೆ ಆಧರಿಸಿ ಹಂತ–ಹಂತವಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ರಾಕೇಶ್‌ ಸಿಂಗ್‌ ಭರವಸೆ ನೀಡಿದರು’ ಎಂದು ನಂಜೇಗೌಡ ತಿಳಿಸಿದರು.

‘ಸಮಸ್ಯೆಗಳನ್ನು ಅಧಿಕಾರಿಗಳು ಸರಿಪಡಿಸದೆ ಇದ್ದರೆ ಹೈಕೋರ್ಟ್‌ ಅಥವಾ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಸಿದ್ಧರಿದ್ದೆವು. ಆದರೆ, ಆಯುಕ್ತರು ಸಮಸ್ಯೆಗಳನ್ನು ಆಲಿಸಿ ಭರವಸೆ ನೀಡಿದ್ದಾರೆ. ಹೀಗಾಗಿ ಪರಿಹಾರವಾಗುವ ವಿಶ್ವಾಸವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT