ಪುಸ್ತಕದಲ್ಲಿ ಡ್ರಗ್ಸ್; ಪ್ರಾಧ್ಯಾಪಕ ಸೆರೆ!

7

ಪುಸ್ತಕದಲ್ಲಿ ಡ್ರಗ್ಸ್; ಪ್ರಾಧ್ಯಾಪಕ ಸೆರೆ!

Published:
Updated:
Prajavani

ಬೆಂಗಳೂರು: ಮಾದಕ ವಸ್ತು ಎಂಡಿಎಂಎ ಸಾಗಣೆ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಖಾಸಗಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕನೊಬ್ಬನನ್ನು ಮಾದಕ ವಸ್ತು ಕಳ್ಳಸಾಗಣೆ ನಿಗ್ರಹ ಘಟಕದ (ಎನ್‌ಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.

‘ಮುಂಬೈನಿಂದ ನಗರದ ಕೊರಿಯರ್ ಏಜೆನ್ಸಿಯೊಂದಕ್ಕೆ ಎಂಡಿಎಂಎ ಪಾರ್ಸಲ್ ಬರುತ್ತಿರುವುದಾಗಿ ಖಚಿತ ಮಾಹಿತಿ ಬಂತು. ಆ ಏಜೆನ್ಸಿ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಒಂದು ಪಾರ್ಸಲ್‌ನಲ್ಲಿ ನೋಟ್‌ ಪುಸ್ತಕವಿತ್ತು. ಸಣ್ಣ ಸಣ್ಣ ಪ್ಯಾಕೇಟ್‌ಗಳಲ್ಲಿ ಎಂಡಿಎಂಎ ತುಂಬಿ, ಅವುಗಳನ್ನು ಆ ಪುಸ್ತಕದ ಹಾಳೆಗೆ ಅಂಟಿಸಲಾಗಿತ್ತು’ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

‘ಪಾರ್ಸಲ್‌ ಮೇಲೆ ಪ್ರಾಧ್ಯಾಪಕನ ಮನೆ ವಿಳಾಸವಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ‘ಯಾರೋ ಮುಂಬೈನಿಂದ ಪಾರ್ಸಲ್‌ನಲ್ಲಿ ಕಳುಹಿಸುತ್ತಿದ್ದರು. ಆ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ. ನಗರದಲ್ಲಿ ಎಂಡಿಎಂಎ ಮಾರಾಟ ಮಾಡಿ, ಹಣವನ್ನು ಆ ವ್ಯಕ್ತಿಯ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದೆ. ಈ ಕೆಲಸಕ್ಕೆ ನನಗೆ ಕಮಿಷನ್ ಸಿಗುತ್ತಿತ್ತು’ ಎಂದು ಆತ ಹೇಳಿಕೆ ಕೊಟ್ಟಿದ್ದಾನೆ. ಆತನಿಂದ ₹ 1 ಲಕ್ಷ ಮೌಲ್ಯದ 15 ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದೆ.’

‘ನಗರದಲ್ಲೇ ಎಂ.ಟೆಕ್ ಪದವಿ ಪಡೆದಿದ್ದ ಆರೋಪಿ, ನಂತರ ಉಪನ್ಯಾಸಕನಾಗಿ ಸೇರಿಕೊಂಡಿದ್ದ. ಕಾಲೇಜು ದಿನಗಳಲ್ಲಿ ಮಾದಕ ವ್ಯಸನಿಯಾಗಿದ್ದ ಆತ, ಕ್ರಮೇಣ ಪೆಡ್ಲರ್ (ಪೂರೈಕೆದಾರ) ಆಗಿ ಪರಿವರ್ತನೆಗೊಂಡಿದ್ದ’ ಎಂದು ಮಾಹಿತಿ ನೀಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !