ಎಲಿವೇಟೆಡ್‌ ಕಾರಿಡಾರ್‌: ಜನ ಹೇಳುವುದೇನು?

7

ಎಲಿವೇಟೆಡ್‌ ಕಾರಿಡಾರ್‌: ಜನ ಹೇಳುವುದೇನು?

Published:
Updated:

ಬೆಂಗಳೂರು: ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎಲಿವೇಟೆಡ್‌ ಕಾರಿಡಾರ್‌ ಕುರಿತು ನಾಗರಿಕರು ಹೇಳುವುದೇನು?

ರೈತ ಕುಟುಂಬಗಳಿಗೆ ವಿಮೆ ಮಾಡಿಸಲಿ

ಎಲಿವೇಟೆಡ್ ಕಾರಿಡಾರ್ ಯೋಜನೆಯ ಅಗತ್ಯ ಸದ್ಯಕ್ಕಿಲ್ಲ. ಬದಲಿಗೆ ಆ ಹಣವನ್ನು ಸರ್ಕಾರ ಕೃಷಿಗೆ ಉಪಯೋಗಿಸಿ ರೈತ ಕುಟುಂಬಗಳಿಗೆ ಜೀವ ವಿಮೆ ಮಾಡಿಕೊಡಬೇಕು. ರೈತರು ಬೆಳೆದ ಬೆಳೆಗಳಿಗೆ ಗರಿಷ್ಠ ದರ ನಿಗದಿ ಮಾಡಬೇಕು. ಅಲ್ಲದೆ, ಇರುವ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು.

–ಶಿವಶಂಕರ ಎಸ್., ಮುತ್ತರಾಯನಹಳ್ಳಿ

ಜನರಲ್ಲಿ ಅರಿವು ಮೂಡಿಸಬೇಕು

ವಾಹನ ದಟ್ಟಣೆಯಿಂದ ಮಾಲಿನ್ಯ ಹೆಚ್ಚಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಯೋಜನೆಯಿಂದ ಅದು ಕಡಿಮೆಯಾಗಲಿದೆ. ಆದ್ದರಿಂದ ಇದರ ಕುರಿತು ಜನರಲ್ಲಿ ಅರಿವು ಮೂಡಿಸಬೇಕು.

–ಶೈಲಾವತಿ ದೇವಿ, ತ್ಯಾಗರಾಜ ನಗರ

ನಾಲ್ಕು ಗಾಡಿ ಹೊಂದುವುದಕ್ಕೆ ತಡೆ ಹಾಕಿ

ಎಲಿವೇಟೆಡ್ ಕಾರಿಡಾರ್ ನಿರ್ಮಿಸಿದರೂ ವಾಹನ ದಟ್ಟಣೆ ಕಡಿಮೆಯಾಗುವುದು ಕಷ್ಟ. ಇರುವ ವ್ಯವಸ್ಥೆಯನ್ನು ಸರಿಪಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಒಂದು ಕುಟುಂಬ ನಾಲ್ಕು ಗಾಡಿ, ಒಂದು ಕಾರು ಹೊಂದುವುದಕ್ಕೆ ತಡೆ ತನ್ನಿ. ಮರಗಳ ಮಾರಣಹೋಮವನ್ನು ತಪ್ಪಿಸಬಹುದು.

–ನಾಗವೇಣಿ ಎಂ., ಆರ್.ಟಿ.ನಗರ

ಯಾರಿಗೆ ಬೇಕು ಸ್ವಾಮಿ?

ಇರುವ ರಸ್ತೆಗಳನ್ನು ಸರಿಪಡಿಸುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ. ಹೀಗಿರುವಾಗ ₹25 ಸಾವಿರ ಕೋಟಿ ವೆಚ್ಚದ ಎಲಿವೇಟೆಡ್ ಕಾರಿಡಾರ್ ಯಾರಿಗೆ ಬೇಕು ಸ್ವಾಮಿ?

–ಶಿವಕುಮಾರ ಎಂ., ಕೆ.ಪಿ. ಅಗ್ರಹಾರ

ಟೌನ್‌ಶಿಪ್ ಜಾರಿಯಾದರೆ ಕಾರಿಡಾರ್ ಅಗತ್ಯವಿಲ್ಲ

ನಗರದ ಹೊರಭಾಗದ ನಾಲ್ಕು ದಿಕ್ಕುಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟೌನ್‌ಶಿಪ್ ಯೋಜನೆ ಸಮರ್ಪಕವಾಗಿ ಜಾರಿಯಾದರೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಆಗ ಎಲಿವೇಟೆಡ್ ನಿರ್ಮಾಣ ಮಾಡುವ ಅಗತ್ಯವಿಲ್ಲ.

–ಸುರೇಶ್ ಎಂ., ಹೆಬ್ಬಾಳ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !