ಗುರುವಾರ , ಮೇ 28, 2020
27 °C
ನಸುಕಿನಲ್ಲಿ ದಟ್ಟ ಮಂಜು

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ; 2 ಬಾರಿ ರನ್‌ವೇ ಬಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಸುಕಿನಲ್ಲಿ ದಟ್ಟ ಮಂಜು ಕಾಣಿಸಿಕೊಂಡಿದ್ದರಿಂದಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಗುರುವಾರ ಒಂದೇ ದಿನ ಎರಡು ಬಾರಿ ರನ್‌ವೇ ಬಂದ್‌ ಮಾಡಲಾಯಿತು.

ಬೆಳಿಗ್ಗೆ 5.45 ಗಂಟೆಯಿಂದ 5.56 ಹಾಗೂ ಬೆಳಿಗ್ಗೆ 6.47ರಿಂದ 7.30ರವರೆಗೆ ರನ್‌ವೇಯಲ್ಲಿ ವಿಮಾನಗಳ ಕಾರ್ಯಾಚರಣೆ ಇರಲಿಲ್ಲ. ಅದರಿಂದಾಗಿ 62 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು.

ನಸುಕಿನ 4.22 ಗಂಟೆಯಿಂದ ಬೆಳಿಗ್ಗೆ 8.47ರವರೆಗೆ ನಿಲ್ದಾಣ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಂಜು ಕವಿದ ವಾತಾವರಣವಿತ್ತು. ವಿಮಾನಗಳ ಪೈಲಟ್‌ಗಳಿಗೆ ರನ್‌ವೇ ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. ಅದೇ ಕಾರಣಕ್ಕೆ ವಿಮಾನಗಳ ಲ್ಯಾಂಡಿಂಗ್ ಹಾಗೂ ಟೇಕಾಫ್ ತಡವಾಯಿತು.

ನಿಲ್ದಾಣದಿಂದ ಹೊರಡಬೇಕಿದ್ದ 44 ವಿಮಾನಗಳು ತಡವಾಗಿ ಹಾರಾಟ ನಡೆಸಿದವು. ನಿಲ್ದಾಣದಲ್ಲಿ ಇಳಿಯಬೇಕಿದ್ದ 18 ವಿಮಾನಗಳು ತಡವಾಗಿ ಭೂಸ್ಪರ್ಶ ಮಾಡಿದವು. ಕೆಐಎನಲ್ಲಿ ಇಳಿಯಬೇಕಿದ್ದ ಒಂದು ವಿಮಾನವನ್ನು ಮಾರ್ಗ ಬದಲಾವಣೆ ಮಾಡಿ ಹೈದರಾಬಾದ್‌ಗೆ ಕಳುಹಿಸಲಾಯಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು