ಗುರುವಾರ , ಸೆಪ್ಟೆಂಬರ್ 23, 2021
27 °C

ಸಂಶೋಧನಾ ವಿದ್ಯಾರ್ಥಿಗಳ ತೀವ್ರ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಶೋಧನಾ ವಿದ್ಯಾರ್ಥಿಗಳ ಸ್ಟೈಫಂಡ್‌ ಪರಿಷ್ಕರಣೆ ಪ್ರಮಾಣದ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐಐಎಸ್‌ಸಿ, ಸೆಂಟರ್‌ ಫಾರ್‌ ಥಿಯರಿಟಿಕಲ್‌ ಸೈನ್ಸಸ್‌, ಟಿಐಎಫ್‌ಆರ್‌, ಜೆಎನ್‌ಸಿಎಎಸ್‌ಆರ್‌, ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಇತರ ವೈಜ್ಞಾನಿಕ ಸಂಸ್ಥೆಗಳ ಸಂಶೋಧನಾ ವಿದ್ಯಾರ್ಥಿಗಳು ಸ್ಟೈಫಂಡ್‌ ಮೊತ್ತವನ್ನು ಶೇ 80 ರಷ್ಟು ಪರಿಷ್ಕರಿಸಬೇಕು ಎಂದು ಆರು ತಿಂಗಳಿಂದ ಹೋರಾಟ ನಡೆಸುತ್ತಿದ್ದಾರೆ.

‘ಕೇಂದ್ರ ಸರ್ಕಾರ ಕಿರಿಯ ಸಂಶೋಧನಾ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹ 25,000 ದಿಂದ ₹ 31,000 ಮತ್ತು ಹಿರಿಯ ಸಂಶೋಧನಾ ವಿದ್ಯಾರ್ಥಿಗಳಿಗೆ ₹ 35,000 ಹಾಗೂ ಸಂಶೋಧನಾ ಸಹಾಯಕರಿಗೆ ₹47,000 ದಿಂದ ₹54,000ಕ್ಕೆ ಏರಿಕೆ ಮಾಡಿದೆ. ಈ ಮೊತ್ತ ಏನೇನೂ ಸಾಲದು. ನಮ್ಮ ಬೇಡಿಕೆಯಲ್ಲಿ ಶೇ 24ರಷ್ಟು ಮಾತ್ರ ಏರಿಕೆ ಆಗಿದೆ. ನಾವು ಶೇ 80ರಷ್ಟು ಏರಿಕೆ ಕೇಳಿದ್ದೆವು. 2014ರಲ್ಲಿ ಸರ್ಕಾರ ಶೇ 54ರಷ್ಟು ಏರಿಕೆ ಮಾಡಿತ್ತು. ಕನಿಷ್ಠ ಶೇ 50ರಷ್ಟು ಮಾಡಿದರೆ, ನಮ್ಮ ದೈನಂದಿನ ಅಗತ್ಯ ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಐಐಎಸ್‌ಸಿ ವಿದ್ಯಾರ್ಥಿ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ಗೌರವ್‌ ‘ಪ್ರಜಾವಾಣಿ’ಗೆ ಹೇಳಿದ್ದಾರೆ.

‘ಕಿರಿಯ ಸಂಶೋಧಕರಿಗೆ ತಿಂಗಳಿಗೆ ₹ 50,000, ಹಿರಿಯ ಸಂಶೋಧಕರಿಗೆ ₹56,000 ಹಾಗೂ ಪೋಸ್ಟ್‌ ಡಾಕ್ಟರೋಲ್‌ ನಡೆಸುತ್ತಿರುವವರಿಗೆ ₹72,000 ನೀಡಬೇಕು ಎಂಬುದು ನಮ್ಮ ಬೇಡಿಕೆ. ಈ ಸಂಬಂಧ ಗುರುವಾರ ಸಭೆ ನಡೆಸಿ, ಮುಂದೆ ಏನು ಮಾಡಬೇಕು’ ಎಂಬುದನ್ನು ನಿರ್ಧರಿಸಲಾಗುವುದು ಎಂದು ಗೌರವ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು