ಮಂಗಳವಾರ, ಸೆಪ್ಟೆಂಬರ್ 28, 2021
21 °C
ಹಣ್ಣುಗಳ ದರದಲ್ಲಿ ಶೇ 10ರಷ್ಟು ರಿಯಾಯಿತಿ

ಮಾವು, ಹಲಸು ಬೇಕೇ, ಹಾಪ್‌ಕಾಮ್ಸ್‌ಗೆ ಬನ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಾಪ್‌ಕಾಮ್ಸ್‌ ವತಿಯಿಂದ ಇದೇ 17 ರಂದು ಹಡ್ಸನ್‌ ವೃತ್ತದ ಹಾಪ್‌ಕಾಮ್ಸ್‌ ಶೀತಲಗೃಹದ ಆವರಣದಲ್ಲಿ ಮಾವು ಮತ್ತು ಹಲಸು ಮಾರಾಟ ಮೇಳವನ್ನು ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎ.ಎಸ್‌.ಚಂದ್ರೇಗೌಡ, ‘ರೈತರು ಬೆಳೆದಂತಹ ಮಾವು ಮತ್ತು ಹಲಸಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಈ ವರ್ಷವೂ ಮೇಳವನ್ನು ಆಯೋಜಿಸಲಾಗಿದೆ. ಶೇ 10ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು‘ ಎಂದರು  

‘ರಾಜ್ಯದಲ್ಲಿ ಬೆಳೆಯುವ ಮಾವಿನ ತಳಿಗಳಾದ ಬಾದಾಮಿ, ರಸಪುರಿ, ಮಲ್ಲಿಕಾ, ಸೇಂದೂರ, ಬಂಗನ್‌ಪಲ್ಲಿ, ಸಕ್ಕರೆಗುತ್ತಿ, ಕಾಲಾಪಾಡು, ಮಲಗೋಬಾ, ತೋತಾಪುರಿ, ನೀಲಂ, ಅಮ್ರಪಾಲಿ, ಕೇಸರ್‌, ದಾಶೆರಿ ಮೇಳದಲ್ಲಿ ಲಭ್ಯ ಇರಲಿವೆ. ಈ ಹಣ್ಣುಗಳು ಮಾಗುವಂತೆ ಮಾಡಲು ರಾಸಾಯನಿಕಗಳನ್ನು(ಕಾರ್ಬೈಡ್‌) ಬಳಸುವುದಿಲ್ಲ‘ ಎಂದು ಹೇಳಿದರು.

‘ಸ್ವಾತಂತ್ರ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರು ಬೆಳಿಗ್ಗೆ 10.30 ಕ್ಕೆ ಈ ಮೇಳ ಉದ್ಘಾಟಿಸಲಿದ್ದಾರೆ, ಚಲನಚಿತ್ರ ನಿರ್ದೇಶಕ ಬಿ.ಎಸ್‌.ಲಿಂಗದೇವರು ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ‘ ಎಂದು ಅವರು ತಿಳಿಸಿದರು.

ಮಾವಿನ ಹಣ್ಣುಗಳ ದರ ಪಟ್ಟಿ (ಪ್ರತಿ ಕೆ.ಜಿ.ಗೆ ₹ )

*ಬಾದಾಮಿ – 80

*ರಸಪುರಿ – 65

*ಅಮ್ರಪಾಲಿ – 78

*ಬಂಗನ್‌ಪಲ್ಲಿ – 65

*ತೋತಾಪುರಿ – 28

*ಕೇಸರಿ – 75

*ಮಲ್ಲಿಕಾ – 80

*ಮಲಗೋಬಾ– 110

*ಸಕ್ಕರೆ ಗುತ್ತಿ – 80

*ಕಾಲಾಪಾಡು – 80

*ದಾಶೆರಿ – 85

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು