ಭಾನುವಾರ, ಡಿಸೆಂಬರ್ 15, 2019
24 °C
ಮಾಜಿ ರಾಜ್ಯಪಾಲ ಮೆಲುಕು

ಬಬ್ಬೂರುಕಮ್ಮೆ ವಸತಿ ನಿಲಯ ಜೀವನ ರೂಪಿಸಿತು: ರಾಮಾಜೋಯಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ಆರ್ಥಿಕ ಸಮಸ್ಯೆಯ ಕಾರಣ ಪದವಿಯ ಆಸೆಯನ್ನು ಅದುಮಿಟ್ಟುಕೊಂಡು ಪರಿತಪಿಸುತ್ತಿದ್ದ ಕಾಲದಲ್ಲಿ ಬಬ್ಬೂರುಕಮ್ಮೆ ವಸತಿ ನಿಲಯ ನನ್ನ ಕೈಹಿಡಿದು ಜೀವನ ಕಟ್ಟಿಕೊಳ್ಳಲು ಸಹಕಾರಿಯಾಯಿತು’ ಎಂದು ಮಾಜಿ ರಾಜ್ಯಪಾಲ ರಾಮಾಜೋಯಿಸ್‌ ಹೇಳಿದರು.

ಬಬ್ಬೂರುಕಮ್ಮೆ ಸೇವಾ ಸಮಿತಿ ಹಮ್ಮಿಕೊಂಡಿದ್ದ ಬಬ್ಬೂರುಕಮ್ಮೆ ಭವನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘1947ರಲ್ಲಿ ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದೆ. ಆಗ ಅಣ್ಣಂದಿರು ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮುಂದೆ ಓದುವ ಆಸೆಯಿದ್ದರೂ ಆರ್ಥಿಕ ಸಂಕಷ್ಟದ ಕಾರಣ ಆಗುಂಬೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿಕೊಂಡೆ. ಅಲ್ಲಿ ಎರಡು ವರ್ಷ ಕಾರ್ಯನಿರ್ವಹಿಸಿದೆ. ಶಿವಮೊಗ್ಗದ ಹಿರಿಯರ ಸಲಹೆಯ ಮೇರೆಗೆ ಬಬ್ಬೂರುಕಮ್ಮೆ ವಸತಿ ನಿಲಯ ಸೇರಿ ಬಿಎಸ್‌ಸಿ ಮುಗಿಸಿದೆ’ ಎಂದರು.

‘ಮುಂದೆ ಕಾನೂನು ಪದವಿ ಮಾಡುವ ಆಸೆಯಾಯಿತು. ಆದರೆ, ಶುಲ್ಕ ಕಟ್ಟುಲು ಹಣವಿರಲಿಲ್ಲ. ಪತ್ರಿಕೆಯೊಂದರ ಸಂಪಾದಕರು ಶುಲ್ಕ ಕಟ್ಟಿ ಕಾನೂನು ಕಾಲೇಜಿಗೆ ಸೇರಿಸಿದರು. ಇಷ್ಟೆಲ್ಲಾ ಸಾಧನೆಗೆ ಬಬ್ಬೂರುಕಮ್ಮೆ ವಸತಿ ನಿಲಯ ಕಾರಣ. ಅದಕ್ಕೆ ನಾನು ಕೃತಜ್ಞನಾಗಿದ್ದೇನೆ’ಎಂದರು.

ತಿಪಟೂರು ಶಾಸಕ ಬಿ.ಸಿ ನಾಗೇಶ್‌, ‘ಗ್ರಾಮೀಣ ಭಾಗದಲ್ಲಿ ಆದಾಯ ಕಡಿಮೆ ಇರುತ್ತದೆ. ವಸತಿ ನಿಲಯಗಳನ್ನು ನಿರ್ಮಿಸಿದರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಬಬ್ಬೂರುಕಮ್ಮೆ ಸೇವಾ ಸಮಿತಿ ಆ ಕೆಲಸವನ್ನು ತುಂಬಾ ವ್ಯವಸ್ಥಿತವಾಗಿ ಮಾಡುತ್ತಿದೆ. ದಾನಿಗಳಿಂದ ಹಣ ಸಂಗ್ರಹಿಸಿ ವಿದ್ಯಾರ್ಥಿಗಳಿಗಾಗಿ ಸುಸಜ್ಜಿತ ವಸತಿ ನಿಲಯವನ್ನು ನಿರ್ಮಿಸಿದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು