ಬೆಂಗಳೂರು: ಗೊರಗುಂಟೆಪಾಳ್ಯದ ಹೋಟೆಲೊಂದರ ಕೊಠಡಿಯಲ್ಲಿ ಕೋಲ್ಕತ್ತದ ಮಹಿಳೆಯೊಬ್ಬರ ಮೇಲೆ ಪರಿಚಯಸ್ಥನೇ ಅತ್ಯಾಚಾರಕ್ಕೆ ಯತ್ನಿಸಿದ್ದು, ಆ ಸಂಬಂಧ ಆರ್.ಎಂ.ಸಿ. ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಗರದಲ್ಲಿ ಫೆ. 8, 9ರಂದು ಆಯೋಜಿಸಿದ್ದ ಕಂಪನಿಯ ಸಮಾವೇಶದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಬಂದಿದ್ದ 39 ವರ್ಷದ ಮಹಿಳೆ, ಹೋಟೆಲ್‌ನ ಕೊಠಡಿಯಲ್ಲಿ ವಾಸವಿದ್ದರು. ಅದೇ ಹೋಟೆಲ್‌ನ ಮತ್ತೊಂದು ಕೊಠಡಿಯಲ್ಲಿ ಉಳಿದುಕೊಂಡಿದ್ದ ಆರೋಪಿ ಮುಖರ್ಜಿ ಎಂಬಾತನೇ ಕೃತ್ಯ ಎಸಗಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಕೋಲ್ಕತ್ತದ ಒಂದೇ ಕಂಪನಿಯಲ್ಲಿ ಮಹಿಳೆ ಹಾಗೂ ಆರೋಪಿ ಕೆಲಸ ಮಾಡುತ್ತಿದ್ದರು. ಫೆ. 8ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು ರಾತ್ರಿ ವಾಪಸ್ ಹೋಟೆಲ್‌ಗೆ ಬಂದಿದ್ದರು. ಕುಡಿದ ಮತ್ತಿನಲ್ಲಿದ್ದ ಆರೋಪಿ ರಾತ್ರಿ 11.45ರ ಸುಮಾರಿಗೆ ಮಹಿಳೆಯ ಕೊಠಡಿಗೆ ಹೋಗಿ ಕುಡಿಯಲು ನೀರು ಕೇಳಿದ್ದ. ಸಂತ್ರಸ್ತೆಯು ನೀರು ಕೊಡುತ್ತಿದ್ದಂತೆ ಅವರ ಕೈ ಹಿಡಿದುಕೊಂಡಿದ್ದ ಆರೋಪಿ, ಬೆಡ್ ಮೇಲೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ.’

‘ಬಾತ್‌ರೂಮ್‌ಗೂ ಎಳೆದೊಯ್ದು ಬಾಗಿಲು ಲಾಕ್ ಮಾಡಿ ಅಸಭ್ಯವಾಗಿ ವರ್ತಿಸಿದ್ದ. ಸಿಗರೇಟ್ ಸೇದುತ್ತ, ಸಂತ್ರಸ್ತೆಯ ಬಾಯಲ್ಲೂ ಸಿಗರೇಟ್ ಇಟ್ಟು ಹಿಂಸಿಸಿದ್ದ. ಆತನಿಂದ ತಪ್ಪಿಸಿಕೊಂಡು ಹೊರಗೆ ಬರಲು ಸಂತ್ರಸ್ತೆ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಸಹಾಯಕ್ಕಾಗಿ ಮಹಿಳೆ ಕೂಗಾಡುತ್ತಿದ್ದಂತೆ ಆರೋಪಿ ಅಲ್ಲಿಂದ ಹೊರಟು ಹೋಗಿದ್ದ. ನಂತರ ಮಹಿಳೆ, ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ಹೋಟೆಲ್ ಸಿಬ್ಬಂದಿ ಸಹಾಯ ಪಡೆದು ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಎಂಟು ತಿಂಗಳ ಹಿಂದಷ್ಟೇ ನನಗೆ ಮಗುವಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ಮುಖರ್ಜಿ ಎದುರು ಗೋಗರೆದಿದ್ದೆ. ಅಷ್ಟಾದರೂ ಆತ ನನ್ನನ್ನು ಬಿಡಲಿಲ್ಲ. ಬಲವಂತವಾಗಿ ನನ್ನ ದೇಹದ ಎಲ್ಲ ಭಾಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.