ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕಾಡಿನಲ್ಲಿ ಪರಿಸರ ವಿಸ್ಮಯಗಳ ಸಂಶೋಧನೆ

ಗುಬ್ಬಿ ಲ್ಯಾಬ್ಸ್‌ನಿಂದ ವಿಶಿಷ್ಟ ಕಾರ್ಯಾಗಾರ
Last Updated 5 ಮೇ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಪಶ್ಚಿಮಘಟ್ಟದ ಪ್ರದೇಶದಲ್ಲಿ ಎಷ್ಟೋ ವಿಸ್ಮಯ ಸಂಗತಿಗಳಿವೆ. ಪ್ರಾಣಿ, ಪಕ್ಷಿ, ಸಸ್ಯಗಳು ಮತ್ತು ಒಟ್ಟಾರೆ ಪರಿಸರದಲ್ಲಿರುವ ಹಲವು ವಿಶಿಷ್ಟ ವಿಷಯಗಳನ್ನುವಿಜ್ಞಾನಿಗಳು ಪತ್ತೆ ಮಾಡಿ ಹೊರ ಜಗತ್ತಿಗೆ ಆಗಾಗ ತಿಳಿಸುತ್ತಾರೆ.

ಅದು ನರ್ತಿಸುವ ಕಪ್ಪೆ ಇರಬಹುದು, ಅತಿ ಪ್ರಾಚೀನ ಕಪ್ಪೆ ಮತ್ತು ಹಾವಿನ ಪ್ರಬೇಧಗಳಿರಬಹುದು, ಬೆಳಕು ಚಿಮ್ಮುವ ಸಸ್ಯ ಇರಬಹುದು... ಹೀಗೆ ಎಷ್ಟೋ ವಿಸ್ಮಯಕಾರಿ ಸಂಗತಿಗಳು ಹೊರ ಜಗತ್ತಿಗೆ ಗೊತ್ತಾಗುವುದೇ ಇಂತಹ ಸಂಶೋಧನೆಗಳ ಮೂಲಕ.

ದಟ್ಟ ಕಾಡಿನಲ್ಲಿ ಅಥವಾ ಬೇರೆ ಪರಿಸರದಲ್ಲಿ ಸಂಶೋಧನೆ ಹೇಗೆ ನಡೆಸುತ್ತಾರೆ, ಅದಕ್ಕಾಗಿ ವಿಜ್ಞಾನಿಗಳು ಏನೆಲ್ಲಾ ತಯಾರಿ ಮಾಡಿಕೊಳ್ಳುತ್ತಾರೆ ಎಂಬುದು ವಿಜ್ಞಾನದ ವಿದ್ಯಾರ್ಥಿಗಳು ಮಾತ್ರವಲ್ಲ ಸಾಮಾನ್ಯ ಜನರಿಗೂ ಕುತೂಹಲದ ಸಂಗತಿ.

‘ಗುಬ್ಬಿ ಲ್ಯಾಬ್ಸ್‌’ ಪರಿಸರ ಸಂಶೋಧನೆ ನಡೆಸುವ ಕುರಿತು ವಿಶಿಷ್ಟ ಕಾರ್ಯಾಗಾರವನ್ನು ಈ ಬಾರಿ ಆಗುಂಬೆಯ ಮಳೆಕಾಡಿನ ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಂಡಿದೆ.

‘ಈ ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ಸಂಶೋಧನೆ ಬಗ್ಗೆ ಪ್ರಾಥಮಿಕ ಹಂತದ ಜ್ಞಾನ ಮತ್ತು ಕೌಶಲ್ಯಗಳನ್ನು ಹೇಳಿಕೊಡಲಾಗುತ್ತದೆ. ಸಂಶೋಧನೆ ಬಗ್ಗೆ ಆಸಕ್ತಿ ಹುಟ್ಟಿಸುವುದು ಮತ್ತು ಅದರಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದೇ ಕಾರ್ಯಾಗಾರದ ಮುಖ್ಯ ಉದ್ದೇಶ’ ಎಂದು ಗುಬ್ಬಿ ಲ್ಯಾಬ್ಸ್‌ನ ನಿರ್ದೇಶಕ ಎಚ್‌.ಎಸ್‌.ಸುಧೀರ ಹೇಳಿದರು.

ಪರಿಸರದಲ್ಲಿ ನಿರ್ದಿಷ್ಟ ವಿಷಯದ ಬಗ್ಗೆ ಸಂಶೋಧನೆ ನಡೆಸುವಾಗ ಹೊಸ ಮಾಹಿತಿಗಳನ್ನು ಸಂಗ್ರಹ ಮಾಡುವುದು, ಸಂಗ್ರಹಿಸಿದ ಮಾಹಿತಿ ಮತ್ತು ಅಂಕಿ–ಅಂಶಗಳನ್ನು ಸಾಫ್ಟ್‌ವೇರ್‌ ಮೂಲಕ ವಿಶ್ಲೇಷಣೆ ನಡೆಸುವುದು, ಪಶ್ಚಿಮಘಟ್ಟದಲ್ಲಿ ಮರ, ಗಿಡ, ಪ್ರಾಣಿ, ಪಕ್ಷಿ, ಕಪ್ಪೆಗಳು, ಹಾವು ಯಾವುದೇ ಇರಬಹುದು, ಯಾವುದನ್ನು ಆರಿಸಿಕೊಂಡಿದ್ದೇವೆಯೊ ಅದರ ಮಾದರಿಗಳ ಸಂಗ್ರಹ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಾಗುತ್ತದೆ ಎಂದರು.

ಕ್ಷೇತ್ರ ಅಧ್ಯಯನ ಮತ್ತು ಸಂಗ್ರಹಿಸಿದ ಮಾಹಿತಿ ಆಧರಿಸಿ ಅದರ ಬಗ್ಗೆ ತಜ್ಞರ ಜತೆ ಚರ್ಚೆ ನಡೆಸಲಾಗುತ್ತದೆ. ಅಲ್ಲದೆ, ಮಾಹಿತಿ ಸೈಂಟಿಫಿಕ್‌ ಪೇಪರ್‌ ತಯಾರಿಸುವುದು ಹೇಗೆ ಮತ್ತು ಅದನ್ನು ತಜ್ಞರ ಮುಂದೆ ಸಾದರಪಡಿಸುವುದು ಹೇಗೆ ಎಂಬುದನ್ನೂ ಅಭ್ಯರ್ಥಿಗಳಿಗೆ ಹೇಳಿಕೊಡಲಾಗುತ್ತದೆ ಎಂದು ಅವರು ವಿವರಿಸಿದರು.

ಸ್ಥಳ: ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ, ಆಗುಂಬೆ, ಶಿವಮೊಗ್ಗ ಜಿಲ್ಲೆ.
ದಿನಾಂಕ: ಮೇ 20 ರಿಂದ 25
ಯಾರೆಲ್ಲ ಭಾಗವಹಿಸಬಹುದು: ದ್ವಿತೀಯ ಪಿಯುಸಿ ಮುಗಿಸಿದವರು, ವಿಜ್ಞಾನದ ಸಂಶೋಧನೆಗಳಲ್ಲಿ ಆಸಕ್ತಿ ಹೊಂದಿರುವವರು.

ಏನೆಲ್ಲಾ ಕಲಿಯಬಹುದು
* ಸಂಶೋಧಕರಾಗಿ ಯಾವ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಬೇಕು
* ಯೋಜನಾ ಸಿದ್ಧತೆ ಮತ್ತು ನಿರ್ವಹಣೆ
* ಪ್ರಾಣಿ, ಪಕ್ಷಿ, ಮರಗಳ ಗಣತಿ
* ಮಾದರಿಗಳ ಸಂಗ್ರಹ ಮತ್ತು ಉಸ್ತುವಾರಿ ಕೌಶಲ
* ರಿಮೋಟ್‌ ಸೆನ್ಸಿಂಗ್‌, ಮ್ಯಾಪಿಂಗ್‌
* ವಿಜ್ಞಾನ ಸಂವಹನ,ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವ ಬರಹದ ಕಲಿಕೆ

ವಿವರಗಳಿಗೆ:https://gubbilabs.in ವೆಬ್‌ಸೈಟ್‌ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT