ಇಂದಿರಾ ಕ್ಯಾಂಟೀನ್ ವೆಚ್ಚ ಸರ್ಕಾರವೇ ಭರಿಸಲಿದೆ: ಶೆಟ್ಟರ್

7
ಸ್ವಚ್ಛ– ಸುಂದರ ವಾರ್ಡ್ ಉದ್ಘಾಟನೆ:

ಇಂದಿರಾ ಕ್ಯಾಂಟೀನ್ ವೆಚ್ಚ ಸರ್ಕಾರವೇ ಭರಿಸಲಿದೆ: ಶೆಟ್ಟರ್

Published:
Updated:
Deccan Herald

ಹುಬ್ಬಳ್ಳಿ: ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಪಾಲಿಕೆ ಅನುದಾನ ನೀಡಲಾಗದು ಎಂದು ಸ್ಪಷ್ವಪಡಿಸಲಾಗಿದ್ದು, ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ಎಲ್ಲ ರೀತಿಯ ಮೂಲ ಸೌಕರ್ಯ ಹೊಂದಿರುವ ವಾರ್ಡ್ ಸಂಖ್ಯೆ 34 ‘ಸ್ವಚ್ಛ– ಸುಂದರ ವಾರ್ಡ್’ ಉದ್ಘಾಟನಾ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, ವಾರ್ಷಿಕ ₹12 ಕೋಟಿಯನ್ನು ಇಂದಿರಾ ಕ್ಯಾಂಟೀನ್‌ಗೆ ನೀಡಲು ಸಾಧ್ಯವಾಗುವುದಿಲ್ಲ. ಪಿಂಚಣಿ ಹಣವನ್ನು ಸಹ ಸರ್ಕಾರ ಬಿಡುಗಡೆ ಮಾಡಿಲ್ಲ.

ಈ ಬಗ್ಗೆ ಬೆಂಗಳೂರಿನಲ್ಲಿ ಸಭೆ ನಡೆದ ವೇಳೆ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಸೆಂಬರ್ 21ರ ಒಳಗೆ ಹಣ ಬಿಡುಗಡೆಯಾಗಿದ್ದರೆ ಮತ್ತೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

₹24 ಕೋಟಿ ವೆಚ್ಚದಲ್ಲಿ ಮಲಪ್ರಭಾ ನದಿ ನೀರು ತರುವ ಯೋಜನೆ ಪೂರ್ಣಗೊಂಡ ನಂತರ 3–4 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುವುದು. ಒಟ್ಟು ಎಂಎಲ್‌ಡಿ ನೀರನ್ನು ತರಲಾಗುವುದು. ಈಗ ನಡೆಯುತ್ತಿರುವ ಮುಖ್ಯ ರಸ್ತೆಗಳ ಕಾಮಗಾರಿಗಳು ಪೂರ್ಣಗೊಂಡ ನಂತರ, ಉಳಿದವುಗಳ ಅಭಿವೃದ್ಧಿಯತ್ತ ಗಮನಹರಿಸಲಾಗುವುದು ಎಂದರು.

ವಾಯು ಮಾಲಿನ್ಯ ಪ್ರಮಾಣದ ಬಗ್ಗೆ ಮಾಹಿತಿ ನೀಡುವ, ಟಿ.ವಿ ಪರದೆ ಇರುವ ಹಾಗೂ ವೈಫೈ ಸೌಲಭ್ಯ ಹೊಂದಿರುವ ‘ಗಝೇಬೊ’ವನ್ನು ಸಹ ಉದ್ಘಾಟಿಸಲಾಯಿ. ಪ್ರಮುಖ ರಸ್ತೆಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ, ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗಿದೆ, ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಹಾಗೂ ಸಮರ್ಪಕ ಕಸ ವಿಲೇವಾರಿ ವ್ಯವಸ್ಥೆ ಈ ವಾರ್ಡ್‌ನಲ್ಲಿದೆ.

ಉದ್ಯಾನವನ್ನು ಅಭಿವೃದ್ಧಿಪಡಿಸಿ, ಅಲ್ಲಿ ತೆರೆದ ಜಿಮ್ ಅಳವಡಿಸಿ ಮಾದರಿ ಕಾರ್ಯವನ್ನು ಮಾಡಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ನಾಲೆಯ ಮೇಲೆ ಬೆಡ್ಡಿಂಗ್ ಹಾಕಬೇಕು, ಉದ್ಯಾನದಲ್ಲಿ ಗ್ರಂಥಾಲಯ ಆರಂಭಿಸಬೇಕು ಎಂದು ಕುಂಭಕೋಣಂ ಫ್ಲಾಟ್, ಬೈಲಪ್ಪನವರ ನಗರದ ನಿವಾಸಿಗಳು ಮನವಿ ಮಾಡಿದರು.

ಪಾಲಿಕೆ ಸದಸ್ಯೆ ಲಕ್ಷ್ಮಿ ಲಕ್ಷ್ಮಣ ಉಪ್ಪಾರ, ಬಿಜೆಪಿ ಮಹಾನಗರ ಜಿಲ್ಲೆ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಮುಖಂಡರಾದ ತಿಪ್ಪಣ್ಣ ಮಜಗಿ, ಗೌತಮ್ ಬೇತಾಳ, ಕಿರಣ ಉಪ್ಪಾರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !