ಶುಕ್ರವಾರ, ಮೇ 29, 2020
27 °C

ಬಿಸಿಲಿಗೆ ತಂಪು ಪಾನೀಯಗಳು

ಲೀಲಾ ಚಂದ್ರಶೇಖರ Updated:

ಅಕ್ಷರ ಗಾತ್ರ : | |

Prajavani

ಕಿತ್ತಳೆ ಹಣ್ಣು–ಪಪ್ಪಾಯ

ಬೇಕಾಗುವ ಸಾಮಾಗ್ರಿ: ಒಂದು ಕಿತ್ತಳೆ ಹಣ್ಣಿನ  ಐದಾರು ತೊಳೆಗಳು. ಹಣ್ಣಾದ ಪಪ್ಪಾಯ ಒಂದು ಕಪ್. ಕಾಳು ಮೆಣಸಿನ ಪುಡಿ, ಉಪ್ಪು

ಮಾಡುವ ವಿಧಾನ: ಸಿಪ್ಪೆ ತೆಗೆದ ಕಿತ್ತಳೆ ಹಣ್ಣಿನ ತೊಳೆಗಳ ತಿರುಳು ಮತ್ತು ಬೀಜ ತೆಗೆದ ಪಪ್ಪಾಯಿ ಹಣ್ಣನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಕೊಳ್ಳಿ. ಇದಕ್ಕೆ ಸ್ವಲ್ಪ ಕಾಳು ಮೆಣಸಿನಪುಡಿ, ಚಿಟಿಕೆ ಉಪ್ಪು ಮತ್ತು ಐಸ್ ಕ್ಯೂಬ್ ಹಾಕಿ.

ಬೀಟ್‌ರೂಟ್ ಮತ್ತು ಸೇಬು

ಬೇಕಾಗುವ ಸಾಮಾಗ್ರಿ: ಚೆನ್ನಾಗಿ ತೊಳೆದ ಸಿಪ್ಪೆ ತೆಗೆದ ಬೀಟ್‌ರೂಟ್ ಎರಡು–ಮೂರು ಉದ್ದದ ತುಂಡುಗಳು, ಒಂದು ಇಂಡಿಯನ್ ಸೇಬು, ಎರಡು ಚೆರ‍್ರಿ ಹಣ್ಣು, ಸೌತೇಕಾಯಿ ನಾಲ್ಕು ತುಂಡುಗಳು, ಪಾರಿಜಾತ ಮರದ ಎಲೆ, ಅರಿಶಿನ ಮತ್ತು ನಿಂಬೆರಸ

ಮಾಡುವ ವಿಧಾನ: ಮೇಲಿನ ಎಲ್ಲಾ ಸಾಮಾಗ್ರಿಗಳನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಎರಡು ದೊಡ್ಡ ಲೋಟ ನೀರು ಹಾಕಿ ಚೆನ್ನಾಗಿ ಕುದಿಸಿ, ನಂತರ ಇದನ್ನು ಶೋಧಿಸಿಟ್ಟುಕೊಳ್ಳಿ. ಇದಕ್ಕೆ ನಿಂಬೆ ರಸ ಬೆರೆಸಿ. ಈ ಪಾನೀಯವನ್ನು ಸ್ವಲ್ಪಸ್ವಲ್ಪವೇ ಹೀರುತ್ತಿದ್ದರೆ ಹಿತವೆನಿಸುತ್ತದೆ.

ಸ್ಟಾರ್ ಪ್ರೂಟ್ ಮತ್ತು ಕಪ್ಪು ದ್ರಾಕ್ಷಿ

ಬೇಕಾಗುವ ಸಾಮಾಗ್ರಿ: ಒಂದು ಸ್ಟಾರ್ ಫ್ರೂಟ್ (ನಕ್ಷತ್ರ ಹಣ್ಣು), ಒಂದು ಹಿಡಿಯಷ್ಟು ಕಪ್ಪುದ್ರಾಕ್ಷಿ, ಜೀರಿಗೆ ಪುಡಿ, ಬೆಲ್ಲ, ಉಪ್ಪು, ಶುಂಠಿಪುಡಿ, ಜೇನುತುಪ್ಪ

ಮಾಡುವ ವಿಧಾನ: ಸ್ಟಾರ್ ಪ್ರೂಟ್ ಮತ್ತು ಕಪ್ಪು ದ್ರಾಕ್ಷಿಯನ್ನು ಮಿಕ್ಸಿಯಲ್ಲಿ ರುಬ್ಬಿ, ಶೋಧಿಸಿಕೊಳ್ಳಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಜೀರಿಗೆ ಪುಡಿ, ಬೆಲ್ಲ ಅಥವಾ ಬೆಲ್ಲದ ಪುಡಿ ಮತ್ತು ಜೇನುತುಪ್ಪ ಹಾಕಿ. ಸ್ವಲ್ಪ ಶುಂಠಿ ಪುಡಿ, ನಿಂಬೆರಸ, ಐಸ್ ಕ್ಯೂಬ್ ಸೇರಿಸಿದರೆ ಸ್ಟಾರ್ ಫ್ರೂಟ್–ಕಪ್ಪು ದ್ರಾಕ್ಷಿಯ ಪಾನೀಯ ರೆಡಿ.

ಕಲ್ಲಂಗಡಿ–ದ್ರಾಕ್ಷಿ

ಬೇಕಾಗುವ ಸಾಮಾಗ್ರಿ: ಒಂದು ಲೋಟ ಕಲ್ಲಂಗಡಿ ಹಣ್ಣಿನ ಹೋಳು, ಅರ್ಧ ಲೋಟ ತಾಜಾ ಹಸಿರು ದ್ರಾಕ್ಷಿ, ಬೆಲ್ಲ, ಉಪ್ಪು, ಕಾಳು ಮೆಣಸಿನ ಪುಡಿ, ಜೇನುತುಪ್ಪ, ನಿಂಬೆರಸ, ಐಸ್ ಕ್ಯೂಬ್

ಮಾಡುವ ವಿಧಾನ: ಒಂದು ಲೋಟ ಕತ್ತರಿಸಿದ ಕಲ್ಲಂಗಡಿ ಹಣ್ಣಿನ ಹೋಳುಗಳು ಮತ್ತು ಒಂದು ಲೋಟ ಹಸಿರು ದ್ರಾಕ್ಷಿ (ಎರಡೂ ಹಣ್ಣುಗಳ ಬೀಜ ತೆಗೆದಿರಬೇಕು)ಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ, ನಂತರ ಶೋಧಿಸಿಟ್ಟುಕೊಳ್ಳಿ. ಇದಕ್ಕೆ ಬೆಲ್ಲದ ಪುಡಿ (ಬೇಕಾದವರು ಸಕ್ಕರೆಯನ್ನೂ ಹಾಕಿಕೊಳ್ಳಬಹುದು), ಚಿಟಿಕೆ ಉಪ್ಪು, ಕಾಳುಮೆಣಸಿನ ಪುಡಿ ಸೇರಿಸಿ, ಸಿಹಿ ಹೆಚ್ಚು ಬೇಕೆನ್ನುವವರು ಸ್ವಲ್ಪ ಜೇನುತುಪ್ಪವನ್ನು ಹಾಕಿಕೊಳ್ಳಬಹುದು. ಕೊನೆಗೆ ನಿಂಬೆ ಹಣ್ಣಿನ ರಸ ಮತ್ತು ಐಸ್ ಕ್ಯೂಬ್ ಹಾಕಿದರೆ, ಕಲ್ಲಂಗಡಿ–ದ್ರಾಕ್ಷಿ ಹಣ್ಣಿನ ತಂಪು ಪಾನೀಯ ಕುಡಿಯಲು ಸಿದ್ಧ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.