ಮುಂಬೈ: ಲಾಕ್ಡೌನ್ ನಿರ್ಬಂಧದ ನಡುವೆಯೂಬಾಲಿವುಡ್ ನಟ ಅಕ್ಷಯ್ಕುಮಾರ್ ಹೆಲಿಕಾಪ್ಟರ್ನಲ್ಲಿನಾಸಿಕ್ಗೆ ಪ್ರಯಾಣ ಮಾಡಿ, ಅಲ್ಲಿನ ರೆಸಾರ್ಟ್ವೊಂದರಲ್ಲಿ ಉಳಿದುಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

ಎರಡು ದಿನಗಳ ಹಿಂದೆ ಅಕ್ಷಯ್ಕುಮಾರ್ ಹೆಲಿಕಾಪ್ಟರ್ನಲ್ಲಿ ಮುಂಬೈನಿಂದ ಹೊರಟು ಅಂಜನೇರಿ ವಡೋಲಿಯ ಸಖ್ಪಾಲ್ ನಾಲೆಡ್ಜ್ ಹಬ್ಗೆ ಬಂದಿಳಿದಿದ್ದರು. ನಂತರ ‘ಗ್ರೇಪ್ ಕಂಟ್ರಿ ’ ರೆಸಾರ್ಟ್ನಲ್ಲಿ ಉಳಿದುಕೊಂಡಿದ್ದರು. ಪ್ರಯಾಣವು ಗ್ರಾಮೀಣ ಪೊಲೀಸರ ವ್ಯಾಪ್ತಿಯಲ್ಲಿದ್ದಾಗಲೂನಾಸಿಕ್ ನಗರ ಪೊಲೀಸರು ನಟನಿಗೆ ಬೆಂಗಾವಲು ಒದಗಿಸಿದ್ದರುಎಂಬುದು ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ವಿವರ ನೀಡುವಂತೆನಾಸಿಕ್ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಛಗನ್ ಭುಜ್ಬಲ್ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

’ಭೇಟಿಯ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಜನರೇ ಈ ಬಗ್ಗೆ ದೂರಿದ್ದಾರೆ. ಮಳೆಗಾಲದಲ್ಲಿ, ಲಾಕ್ಡೌನ್ ಸಂದರ್ಭದಲ್ಲಿ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ಇದೆಯೇ, ತಿಳಿದಿಲ್ಲ. ರೆಸಾರ್ಟ್ನಲ್ಲಿ ಉಳಿದುಕೊಳ್ಳಬಹುದೇ, ಯಾವ ಕಾರಣಕ್ಕಾಗಿ ಈ ಭೇಟಿ ಇತ್ತು ಮತ್ತು ಅನುಮತಿ ನೀಡಿದವರು ಯಾರು? ಈ ಎಲ್ಲದರ ಬಗ್ಗೆ ಮಾಹಿತಿ ಪಡೆಯುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದು ಭುಜ್ಬಲ್ ಹೇಳಿದ್ದಾರೆ.

ಮೂಲಗಳ ಪ್ರಕಾರ ಅಕ್ಷಯ್ ನಾಸಿಕ್ನ ತ್ರಯಂಬಕೇಶ್ವರದಲ್ಲಿ ಸಮರ ಕಲೆ, ಪ್ರಕೃತಿಚಿಕಿತ್ಸೆ ಮತ್ತು ಧ್ಯಾನಕೇಂದ್ರವನ್ನು ತೆರೆಯಲು ಯೋಜಿಸಿದ್ದಾರೆ ಎನ್ನಲಾಗಿದೆ. ಆದರೆ, ಅವರುನಾಸಿಕ್ಗೆ ಭೇಟಿ ನೀಡಿದ್ದು ವೈದ್ಯಕೀಯ ಚಿಕಿತ್ಸೆಗಾಗಿ ಎಂದು ಗೊತ್ತಾಗಿದೆ. ನಾಸಿಕ್ನ ಉನ್ನತ ಪೊಲೀಸ್ಅಧಿಕಾರಿಗಳಿಗಾಗಿ ಬೆಂಗಾವಲು ನೀಡಲಾಗಿತ್ತೇ ಹೊರತು ನಟನಿಗಾಗಿ ಅಲ್ಲ ಎಂದು ಭುಜ್ಬಲ್ ಅವರ ಕಚೇರಿಯು ಸ್ಪಷ್ಟನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.