ಶನಿವಾರ, ಜುಲೈ 31, 2021
25 °C

ಪ್ರಧಾನಿ ಮೋದಿ ಚೀನಾ ಹೆಸರು ಹೇಳದೆ ಇರುವ ಉದ್ದೇಶ ಏನು: ಪಿ.ಚಿದಂಬರಂ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಾರದಲ್ಲಿ ಮೂರು ಬಾರಿ ವಿಷಯ ಪ್ರಸ್ತಾಪಿಸಿದರೂ ಪ್ರಧಾನಿ ನರೇಂದ್ರ ಮೋದಿ ಚೀನಾವನ್ನು 'ಆಕ್ರಮಣಕಾರಿ' ಎಂದು ಹೇಳದೆ, ಈ ರಾಷ್ಟ್ರದ ಜನತೆಗೆ ಹಾಗೂ ಲಡಾಖನ ಜವಾನರಿಗೆ ಶತ್ರು ರಾಷ್ಟ್ರದ ಹೆಸರು ಹೇಳದಿರುವ ಉದ್ದೇಶವೇನು ಎಂದು ಮಾಜಿ ಹಣಕಾಸು ಸಚಿವ ಚಿದಂಬರಂ ಪ್ರಶ್ನಿಸಿದ್ದಾರೆ.

ಈ ಕುರಿತು ಶುಕ್ರವಾರ ಚಿದಂಬರಂ ಸರಣಿ ಟ್ವೀಟ್ ಮಾಡಿದ್ದಾರೆ.  ಅಲ್ಲದೆ, ಲಡಾಖ್ ಗಾಲ್ವಾನ್ ಕಣಿವೆಯಲ್ಲಿ ಕಳೆದ ತಿಂಗಳು ಗಡಿನಿಯಂತ್ರಣ ರೇಖೆಯಲ್ಲಿ ನಡೆದ ಹಿಂಸಾತ್ಮಕ ಕೃತ್ಯಗಳ ಹಿನ್ನೆಲೆಯಲ್ಲಿ ಚೀನಾವನ್ನು ಆಕ್ರಮಣಕಾರಿ ಎಂದು ಕರೆಯಲು ಪ್ರಧಾನಿ ನರೇಂದ್ರಮೋದಿ ಅವರಿಗೆ ಮನಸ್ಸಿಲ್ಲದಿರುವ ಕುರಿತು ಪ್ರಸ್ತಾಪಿಸಿದ್ದಾರೆ.

ಭಾರತ ಹಾಗೂ ಚೀನಾದ ಸೈನಿಕರ ನಡುವೆ ಎಲ್ಲಿ ಘರ್ಷಣೆಗಳು ನಡೆದವು, ಚೀನಾ ಭಾರತದ ಭೂಪ್ರದೇಶದ ಒಳನುಗ್ಗಿದೆಯೇ ಎಂಬ ಬಗ್ಗೆ ಪ್ರಧಾನಮಂತ್ರಿ ಮೌನ ವಹಿಸಿದ್ದಾರೆ. ಜೂನ್ 15 ಹಾಗೂ16 ರಂದು ಚೀನಾ ಮತ್ತು ಭಾರತೀಯ ಪಡೆಗಳ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದ ಸ್ಥಳದ ಬಗ್ಗೆ ಕೇಳಿದ ಪ್ರಶ್ನೆಗೂ ಉತ್ತರಿಸಿಲ್ಲ. ಭಾರತದ ಭೂಪ್ರದೇಶಕ್ಕೆ ಹಲವಾರು ಹಂತಗಳಲ್ಲಿ ಒಳನುಗ್ಗಿದ್ದರೆ ಎಂಬ ನಮ್ಮ ಪ್ರಶ್ನೆಗಳಿಗೆ ಪ್ರಧಾನಿ ಇನ್ನೂ ಉತ್ತರಿಸಿಲ್ಲ ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಅಲ್ಲದೆ, ವಿವಾದಾಸ್ಪದ ಭಾರತೀಯ ಭೂಪ್ರದೇಶವೆಂದು ಪರಿಗಣಿಸಲ್ಪಟ್ಟ ಸ್ಥಳಗಳಲ್ಲಿ ಚೀನಾದ ಸೈನ್ಯವು ಬೀಡು ಬಿಟ್ಟಿವೆ ಎಂದು ತೋರಿಸುವ ಉಪಗ್ರಹ ಚಿತ್ರಗಳ ಕುರಿತು ಕೇಳಿದ ನಮ್ಮ ಪ್ರಶ್ನೆಗಳಿಗೂ ಉತ್ತರ ನೀಡಲಿ ಎಂದು ಚಿದಂಬರಂ ಟ್ವೀಟ್‌‌ನಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು