ಮಂಗಳವಾರ, ಆಗಸ್ಟ್ 3, 2021
27 °C

ಕೋವಿಡ್–19 ಲಸಿಕೆಯ ಮಾನವ ಪ್ರಯೋಗ ಆರಂಭ: ಐಸಿಎಂಆರ್‌

ಪಿಟಿಐ Updated:

ಅಕ್ಷರ ಗಾತ್ರ : | |

Covid19 vaccine

ನವದೆಹಲಿ: ಕೋವಿಡ್–19ಗೆ ದೇಶದಲ್ಲಿ ಅಭಿವೃದ್ಧಿಪಡಿಸಲಾದ ಎರಡು ಲಸಿಕೆಗಳ ಮಾನವ ‍ಪ್ರಯೋಗ ಆರಂಭಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ. ಸುಮಾರು 1,000 ಜನ ಸ್ವ ಇಚ್ಚೆಯಿಂದ ಲಸಿಕೆ ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂದು ಮಂಡಳಿ ಹೇಳಿದೆ.

ಭಾರತವು ಜಗತ್ತಿನಲ್ಲೇ ಅತಿಹೆಚ್ಚು ಲಸಿಕೆ ತಯಾರಿಸುವ ದೇಶವಾಗಿದೆ. ಹೀಗಾಗಿ, ಕೊರೊನಾ ವೈರಸ್ ಪ್ರಸರಣದ ಸರಪಳಿಯನ್ನು ಮುರಿಯುವ ನಿಟ್ಟಿನಲ್ಲಿ ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ನಡೆಸಬೇಕಾಗಿರುವುದು ದೇಶದ ನೈತಿಕ ಜವಾಬ್ದಾರಿಯೂ ಆಗಿದೆ ಎಂದು ಐಸಿಎಂಆರ್ ನಿರ್ದೇಶಕ ಡಾ. ಬಲರಾಂ ಭಾರ್ಗವ ಹೇಳಿದ್ದಾರೆ.

ಎರಡು ಲಸಿಕೆಗಳ ಪೈಕಿ ಒಂದನ್ನು ಐಸಿಎಂಆರ್ ಸಹಯೋಗದೊಂದಿಗೆ ‘ಭಾರತ್ ಬಯೋಟೆಕ್ ಲಿಮಿಟೆಡ್’ ಅಭಿವೃದ್ಧಿಪಡಿಸಿದೆ. ಮತ್ತೊಂದು ಲಸಿಕೆಯನ್ನು ‘ಝೈಡಸ್ ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್’ ಅಭಿವೃದ್ಧಿಪಡಿಸಿದ್ದು, ಮೊದಲ ಮತ್ತು ಎರಡನೇ ಹಂತದ ಮಾನವ ಪ್ರಯೋಗ ನಡೆಯಲಿದೆ. ಈ ಎರಡೂ ಲಸಿಕೆಗಳಿಗೆ ‘ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)’ ಅನುಮತಿ ನೀಡಿದೆ.

ಇದನ್ನೂ ಓದಿ: 

ಎರಡು ಲಸಿಕೆಗಳನ್ನು ಈಗಾಗಲೇ ಇಲಿಗಳು, ಮೊಲಗಳ ಮೇಲೆ ಯಶಸ್ವಿಯಾಗಿ ಪ್ರಯೋಗ ಮಾಡಲಾಗಿದ್ದು, ದತ್ತಾಂಶವನ್ನು ಡಿಸಿಜಿಐಗೆ ಸಲ್ಲಿಸಲಾಗಿದೆ. ಉಭಯ ಲಸಿಕೆಗಳ ಮೊದಲ ಹಂತದ ಮಾನವ ಪ್ರಯೋಗಕ್ಕೆ ಅನುಮತಿ ದೊರೆತಿದೆ ಎಂದೂ ಭಾರ್ಗವ ತಿಳಿಸಿದ್ದಾರೆ.

ಆಗಸ್ಟ್ 15ರ ಮೊದಲು ಕೋವಿಡ್ ಲಸಿಕೆ ಬಿಡುಗಡೆ ಮಾಡುವ ಬಗ್ಗೆ ಭಾರ್ಗವ ಅವರು ಇತ್ತೀಚೆಗೆ ಬರೆದಿದ್ದ ಪತ್ರ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಲಸಿಕೆ ಬಿಡುಗಡೆಗೆ ಹೀಗೆ ಸಮಯದ ಗಡುವು ವಿಧಿಸುವುದು ಅಪ್ರಾಯೋಗಿಕ ಎಂದು ಅನೇಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು