ಮಂಗಳವಾರ, ಆಗಸ್ಟ್ 3, 2021
22 °C

Covid-19 India Update | ಮಹಾರಾಷ್ಟ್ರದಲ್ಲಿ ಒಂದೇ ದಿನ 6555 ಪ್ರಕರಣ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Covid19 India update

ನವದೆಹಲಿ: ದೇಶದಾದ್ಯಂತ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಭಾನುವಾರವೂ ಅನೇಕ ರಾಜ್ಯಗಳಲ್ಲಿ ಸಾವಿರಕ್ಕೂ ಮಿಕ್ಕಿ ಪ್ರಕರಣಗಳು ದೃಢಪಟ್ಟಿವೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 6,555 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 151 ಜನ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2,06,619 ತಲುಪಿದ್ದು, ಈವರೆಗೆ 8,822 ಜನ ಮೃತಪಟ್ಟಿದ್ದಾರೆ. ಸದ್ಯ 86,040 ಸಕ್ರಿಯ ಪ್ರಕರಣಗಳಿವೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.

ತಮಿಳುನಾಡಿನಲ್ಲಿ 4,150 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 60 ಸಾವು ಸಂಭವಿಸಿದೆ. ಒಟ್ಟು ಸೋಂಕಿತರ ಸಂಖ್ಯೆ 1,11,151ಕ್ಕೆ ಏರಿಕೆಯಾಗಿದೆ. ಈವರೆಗೆ 1,510 ಮಂದಿ ಅಸುನೀಗಿದ್ದಾರೆ. ಸದ್ಯ 46,860 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ: 

ದೆಹಲಿಯಲ್ಲಿ 2,244 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 63 ಮಂದಿ ಮೃತಪಟ್ಟಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 99,444 ತಲುಪಿದ್ದು, ಸಾವಿನ ಸಂಖ್ಯೆ 3,067 ತಲುಪಿದೆ. ಪ್ರಸ್ತುತ 25,038 ಪ್ರಕರಣಗಳಿವೆ.

ಉತ್ತರ ಪ್ರದೇಶದಲ್ಲಿ 1,155 ಹೊಸ ಪ್ರಕರಣ, 12 ಸಾವು ಸಂಭವಿಸಿದೆ. ಕೇರಳದಲ್ಲಿ 225, ಪಂಜಾಬ್‌ನಲ್ಲಿ 175, ಉತ್ತರಾಖಂಡದಲ್ಲಿ 31, ಪಶ್ಚಿಮ ಬಂಗಾಳದಲ್ಲಿ 895, ಜಮ್ಮು–ಕಾಶ್ಮೀರದಲ್ಲಿ 183, ಗುಜರಾತ್‌ನಲ್ಲಿ 725 ಪ್ರಕರಣಗಳು ದೃಢಪಟ್ಟಿವೆ.

ಫ್ಯಾಕ್ಟ್‌ಚೆಕ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು