ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ಗೆ ದೇಶೀಯ ಲಸಿಕೆ: ಝೈಡಸ್ ಕ್ಯಾಡಿಲಾಗೆ ಕ್ಲಿನಿಕಲ್ ಟ್ರಯಲ್ ಅನುಮತಿ

Last Updated 3 ಜುಲೈ 2020, 3:10 IST
ಅಕ್ಷರ ಗಾತ್ರ

ನವದೆಹಲಿ: ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿರುವ ಮತ್ತೊಂದು ಕೋವಿಡ್‌–19 ಲಸಿಕೆಯ ಮಾನವರ ಮೇಲಿನ ಚಿಕಿತ್ಸಾ ಪ್ರಯೋಗಕ್ಕೆ (ಹ್ಯೂಮನ್‌ ಕ್ಲಿನಿಕಲ್‌ ಟ್ರಯಲ್‌) ಭಾರತದ ಔಷಧ ನಿಯಂತ್ರಣ ಮಹಾನಿರ್ದೇಶನದಿಂದ (ಡಿಸಿಜಿಐ) ಗುರುವಾರ ಅನುಮತಿ ದೊರೆತಿದೆ. ಅಹಮದಾಬಾದ್‌ ಮೂಲದ ಝೈಡಸ್‌ ಕ್ಯಾಡಿಲಾ ಹೆಲ್ತ್‌ಕೇರ್‌ ಲಿಮಿಟೆಡ್‌ ಕೋವಿಡ್–19 ಲಸಿಕೆ ಅಭಿವೃದ್ದಿ ಪಡಿಸಿದೆ.

ಕೋವಿಡ್‌–19 ವಿಷಯ ತಜ್ಞರ ಸಮಿತಿಯಿಂದ ಶಿಫಾರಸು ಆಧರಿಸಿ ತುರ್ತು ಅಗತ್ಯಗಳಿಗಾಗಿ ಚುರುಕು ಗತಿಯಲ್ಲಿ ಅನುಮತಿ ಪ್ರಕ್ರಿಯೆ ನಡೆಸಲಾಗಿದೆ. 'ಝೈಡಸ್‌ ಕ್ಯಾಡಿಲಾ ಹೆಲ್ತ್‌ಕೇರ್‌ ಅಭಿವೃದ್ಧಿ ಪಡಿಸಿರುವ ಕೊರೊನಾ ವೈರಸ್‌ ಚಿಕಿತ್ಸಕ ಲಸಿಕೆಯ ಒಂದು ಮತ್ತು 2ನೇ ಹಂತರದ ಕ್ಲಿನಿಕಲ್‌ ಟ್ರಯಲ್‌ಗಳಿಗೆ ಡಿಸಿಜಿಐನ ಡಾ.ವಿ.ಜಿ.ಸೊಮಾನಿ ಅವರು ಅನುಮತಿ ನೀಡಿದ್ದಾರೆ. ಕಂಪನಿ ಪ್ರಾಣಿಗಳ ಮೇಲೆ ನಡೆಸಿರುವ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಅನುಮತಿ ದೊರೆತಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಇತ್ತೀಚೆಗಷ್ಟೇ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊರೊನಾ ವೈರಸ್‌ ಲಸಿಕೆ 'ಕೋವಾಕ್ಸಿನ್‌' ಕ್ಲಿನಿಕಲ್‌ ಟ್ರಯಲ್‌ಗೆ ಅನುಮತಿ ನೀಡಲಾಗಿದೆ. ಕೋವಾಕ್ಸಿನ್‌ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಮೊದಲ ಕೋವಿಡ್–19 ಲಸಿಕೆಯಾಗಿದೆ.

ಒಂದು ಮತ್ತು ಎರಡನೇ ಹಂತದ ಕ್ಲಿನಿಕಲ್‌ ಟ್ರಯಲ್‌ ಪೂರ್ಣಗೊಳಿಸಲು ಸುಮಾರು 3 ತಿಂಗಳು ಬೇಕಾಗಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ.

ಈಗಾಗಲೇ ದೇಶದಲ್ಲಿ ದಾಖಲಾಗಿರುವ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ 6 ಲಕ್ಷ ದಾಟಿದೆ. ಸೋಂಕಿನಿಂದ 18 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಕೇವಲ ಐದು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ 5 ಲಕ್ಷದಿಂದ 6 ಲಕ್ಷ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT