ಸೋಮವಾರ, ಸೆಪ್ಟೆಂಬರ್ 28, 2020
27 °C
ಸುರಕ್ಷತೆ ಹೆಚ್ಚಿಸಲು ದೂರಸಂರ್ಪಕ ಇಲಾಖೆ ಸೂಚನೆ

ಚೀನಾ ಕಂಪನಿಗಳಿಂದ ಸೈಬರ್‌ ದಾಳಿ ಸಾಧ್ಯತೆ: ಸುರಕ್ಷತೆ ಹೆಚ್ಚಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಚೀನಾ ಮೂಲದ ಕಂಪನಿಗಳಿಂದ ಸೈಬರ್‌ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ದೂರಸಂಪರ್ಕ ಇಲಾಖೆ ಎಚ್ಚರಿಸಿದೆ. ಹೀಗಾಗಿ ತಮ್ಮ ವೆಬ್‌ಸೈಟ್‌ ಹಾಗೂ ವೆಬ್‌ಪೋರ್ಟಲ್‌ಗಳ ಸುರಕ್ಷತೆಯನ್ನು ಹೆಚ್ಚಿಸುವಂತೆ ತನ್ನ ಅಧೀನದ ಎಲ್ಲ ಇಲಾಖೆಗಳಿಗೆ ಸೂಚನೆ ನೀಡಿದೆ.

ತಾನು ನೀಡಿದ ಸೂಚನೆಯನ್ವಯ ಕೈಗೊಂಡ ಸುರಕ್ಷತಾ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆಯೂ ಇಲಾಖೆ ಸೂಚನೆ ನೀಡಿದೆ. 

ಆಗಸ್ಟ 31ರ ಒಳಗಾಗಿ ಎಲ್ಲ ವೆಬ್‌ಸೈಟ್‌ ಹಾಗೂ ಪೋರ್ಟಲ್‌ಗಳನ್ನು ‘ಜಿಒವಿ.ಐಎನ್’‌ ಡೊಮೇನ್‌ಗೆ ಬದಲಾಯಿಸುವಂತೆ ಇತರ ಸಚಿವಾಲಯಗಳು ಹಾಗೂ ಇಲಾಖೆಗಳಿಗೆ ಸೂಚನೆ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು