ಮಂಗಳವಾರ, ಆಗಸ್ಟ್ 3, 2021
26 °C

ನಾಗ್ಪುರ | ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ; ಐದು ಮಂದಿ ಸಾವು 

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಮನಸ್‌ ಆಗ್ರೋ ಇಂಡಸ್ಟ್ರೀಸ್‌ ಆ್ಯಂಡ್‌ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನಲ್ಲಿ ಶನಿವಾರ ಮಧ್ಯಾಹ್ನ ಬಾಯ್ಲರ್‌ ಸ್ಫೋಟಗೊಂಡಿದ್ದು, ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮಧ್ಯಾಹ್ನ 2.15ರ ಸುಮಾರಿಗೆ ಬೇಲಾ ಗ್ರಾಮದಲ್ಲಿರುವ ಕಂಪನಿಯ ಜೈವಿಕ ಅನಿಲ ಘಟಕದ ಬಳಿ ಅವಘಡ ಸಂಭವಿಸಿದೆ. 

ಮೃತರನ್ನು ವಾಡ್ಗಾಂವ್‌ ಗ್ರಾಮದ ನಿವಾಸಿಗಳಾದ ಮಂಗೇಶ್‌ ಪ್ರಭಾಕರ್‌ ನೌಕರ್ಕರ್‌ (21), ಲಿಲಾಧರ್‌ ವಾಮನ್ರಾವ್‌ ಶೆಂಡೆ (42), ವಾಸುದೇಡಿಯೋ ಲಾಡಿ (30), ಸಚಿನ್ ಪ್ರಕಾಶ್ ವಾಘಮರೆ (24) ಮತ್ತು ಪ್ರಫುಲ್‌ ಪಾಂಡುರಂಗ್‌ ಮೂನ್‌ (25) ಎಂದು ಗುರುತಿಸಲಾಗಿದೆ. 

ಸಚಿನ್‌ ವಾಘಮರೆ ವೆಲ್ಡರ್‌ ಆಗಿ ಕೆಲಸ ಮಾಡುತ್ತಿದ್ದರೆ, ಇತರರು ಸಹಾಯಕರಾಗಿದ್ದರು. ಎಲ್ಲಾ ಐವರು ಕಾರ್ಮಿಕರು ಭೀಕರವಾದ ಸುಟ್ಟ ಗಾಯಗಳಿಗೆ ಒಳಗಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಸ್ಫೋಟದ ಬಳಿಕ ದಟ್ಟವಾದ ಹೊಗೆ ಆವರಿಸಿದೆ. ಸದ್ಯ ಪೊಲೀಸ್‌ ವರಿಷ್ಠಾಧಿಕಾರಿ ರಾಕೇಶ್‌ ಓಲಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು