ನವದೆಹಲಿ: ಕೋವಿಡ್ ರೋಗಿಗಳಿಗೆ ‘ರೆಮ್ಡೆಸಿವಿರ್’ ಔಷಧವನ್ನು ಐದು ದಿನಗಳ ಕಾಲ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.

ಈ ಮೊದಲುಆರು ದಿನಗಳ ಕಾಲ ಔಷಧವನ್ನು ನೀಡಲಾಗುತ್ತಿತ್ತು. ಶುಕ್ರವಾರ ಔಷಧ ಬಳಕೆ ಕುರಿತು ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಇಂಜೆಕ್ಷನ್ ರೂಪದಲ್ಲಿ ಈ ಔಷಧವನ್ನು ನೀಡಲಾಗುತ್ತಿದೆ. ಮೊದಲ ದಿನ 200 ಮಿಲಿ ಗ್ರಾಂ ನೀಡಬೇಕು. ನಂತರ ನಾಲ್ಕು ದಿನಗಳ ಕಾಲ ಪ್ರತಿ ದಿನವೂ 100 ಮಿಲಿ ಗ್ರಾಂ ನೀಡಬೇಕು ಎಂದು ತಿಳಿಸಲಾಗಿದೆ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ‘ರೆಮ್ಡೆಸಿವಿರ್’ ಬಳಸುವುದನ್ನು ಪರಿಗಣಿಸಬಹುದು. ಆದರೆ, ಗರ್ಭಿಣಿಯರಿಗೆ ಮತ್ತು ಎದೆ ಹಾಲುಣಿಸುವವರಿಗೆ ಹಾಗೂ 12 ವರ್ಷದ ಒಳಗಿನವರಿಗೆ ಈ ಔಷಧ ಬಳಸಲು ಶಿಫಾರಸು ಮಾಡಬಾರದು ಎಂದು ಸಚಿವಾಲಯ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.