ಬುಧವಾರ, ಸೆಪ್ಟೆಂಬರ್ 22, 2021
29 °C

ರಾಮಮಂದಿರ ಶಿಲಾನ್ಯಾಸ; ವಾಷಿಂಗ್ಟನ್‌ನಲ್ಲಿರುವ ಹಿಂದೂ ದೇವಾಲಯಗಳಲ್ಲಿ ವಿಶೇಷ ಪೂಜೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಯೋಧ್ಯೆಯಲ್ಲಿ ಇಂದು (ಆ.5) ನಡೆಯಲಿರುವ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮವನ್ನು ಸಂಭ್ರಮಿಸುವುದಕ್ಕಾಗಿ ಅಮೆರಿಕದಲ್ಲಿರುವ ಎಲ್ಲ ಹಿಂದೂದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ನಡೆಯಲಿದೆ.

ಈ ಸಂಭ್ರಮಾಚರಣೆಯ ಭಾಗವಾಗಿ ಟ್ರಕ್‌ವೊಂದಕ್ಕೆ ಎಲ್‌ಇಡಿ ಸ್ಕ್ರೀನ್‌ ಜೋಡಿಸಿ ಅದರಲ್ಲಿ ರಾಮಮಂದಿರ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದ್ದು, ಆ ಟ್ರಕ್‌ ಮಂಗಳವಾರ ರಾತ್ರಿ ರಾಜಧಾನಿಯಲ್ಲಿರುವ ’ಶ್ವೇತಭವನ’ ಸೇರಿದಂತೆ ಪ್ರಮುಖ ತಾಣಗಳಲ್ಲಿ ಸಂಚರಿಸಲಿದೆ.

ವಾಷಿಂಗ್ಟನ್‌ ಡಿಸಿ ಮತ್ತು ಆಸುಪಾಸಿನ ನಗರಗಳಲ್ಲಿ ನೆಲೆಸಿರುವ ಭಾರತೀಯರು ರಾಮಮಂದಿರ ಶಿಲಾನ್ಯಾಸದ ದಿನದಂದು ತಮ್ಮ ಮನೆಗಳಲ್ಲಿ ದೀಪಗಳನ್ನು ಹಚ್ಚುವ ಮೂಲಕ ಐತಿಹಾಸಿಕ ದಿನವನ್ನು ಸಂಭ್ರಮಿಸುವುದಾಗಿ ಇಲ್ಲಿನ ಹಿಂದೂ ಸಮುದಾಯದ ಮುಖ್ಯಸ್ಥರು ತಿಳಿಸಿದ್ದಾರೆ.

ಈಗಾಗಲೇ ನ್ಯೂಯಾರ್ಕ್‌ನ ಟೈಮ್‌ಸ್ಕ್ವೇರ್‌ನಲ್ಲಿ ಶಿಲಾನ್ಯಾಸದ ದಿನ ಬೃಹತ್‌ ಎಲ್‌ಇಡಿ ಪರದೆಯ ಮೇಲೆ ಶ್ರೀರಾಮನ ಪೋಸ್ಟರ್‌ಗಳು ಮತ್ತು ರಾಮಮಂದಿರದ 3ಡಿ ಮಾದರಿ ವಿನ್ಯಾಸದ ಚಿತ್ರಗಳನ್ನು ಪ್ರದರ್ಶಿಸುತ್ತಿರುವುದಾಗಿ ಅಮೆರಿಕನ್‌ ಇಂಡಿಯಾ ಪಬ್ಲಿಕ್‌ ಅಫೇರ್ಸ್‌ ಸಮಿತಿಯ ಜಗದೀಶ್ ಸೆಹಾನಿ ತಿಳಿಸಿದ್ದಾರೆ. ಉತ್ತರ ಅಮೆರಿಕದ ಕ್ಯಾಲಿಫೋನಿರ್ಯಾದಲ್ಲೂ ಅಲ್ಲಿನ ಹಿಂದೂ ಸಮುದಾಯದವರು ದೇವಾಲಯಗಳಲ್ಲಿ ’ವರ್ಚುವಲ್’ ಪೂಜೆ ಪ್ರಾರ್ಥನೆ ನಡೆಸುವ ಮೂಲಕ ಭಾರತದಲ್ಲಿ ನಡೆಯುವ ಈ ಐತಿಹಾಸಿಕ ಕಾರ್ಯಕ್ರಮವನ್ನು ಸಂಭ್ರಮಿಸಲು ಸಿದ್ಧತೆ ನಡೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು