ಗುರುವಾರ , ನವೆಂಬರ್ 26, 2020
19 °C

ಲಾಕ್‌ಡೌನ್‌ನಿಂದಲೂ ಲಾಭ ಗಳಿಸುತ್ತಿರುವ ಸರ್ಕಾರ: ರಾಹುಲ್‌ ಗಾಂಧಿ ಟೀಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಹೇರಲಾಗಿರುವ ಲಾಕ್‌ಡೌನ್‌ನಿಂದಲೂ ಕೇಂದ್ರ ಸರ್ಕಾರ ಲಾಭ ಮಾಡುತ್ತಿದೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. 

 ಕೊರೊನಾ ವೈರಸ್‌ ಸೋಂಕು ಸಾಂಕ್ರಾಮಿಕಗೊಳ್ಳುತ್ತಿರುವ ಸಮಯದಲ್ಲಿ ವಲಸೆ ಕಾರ್ಮಿಕರನ್ನು ಸಾಗಿಸಲು ‘ಶ್ರಮಿಕ್ ರೈಲು‘ಗಳನ್ನು ಓಡಿಸುವ ಮೂಲಕ ಭಾರತೀಯ ರೈಲ್ವೆ ಲಾಭ ಗಳಿಸುತ್ತಿದೆ ಎಂಬ ವರದಿಯನ್ನು ಹಂಚಿಕೊಂಡಿರುವ ಅವರು ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.

‘ರೋಗದ ಕಾರ್ಮೋಡ ಕವಿದಿರುವ ಈ ಹೊತ್ತಿನಲ್ಲಿ ಜನರು ತೊಂದರೆಯಲ್ಲಿದ್ದಾರೆ. ಆದರೆ ಇದರಲ್ಲಿಯೂ ಲಾಭ ಗಳಿಸಲು ಪ್ರಯತ್ನಿಸಲಾಗುತ್ತಿದೆ. ಈ ಜನ ವಿರೋಧಿ ಸರ್ಕಾರವು ವಿಪತ್ತನ್ನು ಲಾಭದಾಯಕವಾಗಿ ಪರಿವರ್ತಿಸಿಕೊಂಡಿದೆ ಮತ್ತು ಗಳಿಕೆಯಲ್ಲಿ ತೊಡಗಿದೆ,’ ಎಂದು ಅವರು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ವಲಸೆಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ‘ಶ್ರಮಿಕ್’ ಹೆಸರಿನಲ್ಲಿ ರೈಲುಗಳನ್ನು ಓಡಿಸಲಾಗಿತ್ತು. ಇದರಿಂದ ರೈಲ್ವೆ ಇಲಾಖೆ ₹428 ಕೋಟಿ ಲಾಭ ಗಳಿಸಿದೆ ಎಂದು ರಾಹುಲ್‌ ಹಂಚಿಕೊಂಡಿದ್ದ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು