ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ರಕ್ಷಣಾ ಸಚಿವರ ಹೇಳಿಕೆಯು ಕೇವಲ ವಾಕ್ಚಾತುರ್ಯವಷ್ಟೆ: ಪಿ.ಚಿದಂಬರಂ

Last Updated 18 ಜುಲೈ 2020, 13:55 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಭೂಪ್ರದೇಶದ ಒಂದು ಇಂಚನ್ನು ಕೂಡ ಮುಟ್ಟಲು ಸಾಧ್ಯವಿಲ್ಲ ಎಂಬ ಕೇಂದ್ರ ರಕ್ಷಣಾ ಸಚಿವ ಹೇಳಿಕೆಯು ಕೇವಲ 'ವಾಕ್ಚಾತುರ್ಯ'ವಷ್ಟೇ ಎಂದಿರುವ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ, ಭದ್ರತಾ ಸಂಸ್ಥೆಗಳ ಲೆಕ್ಕಾಚಾರದ ಪ್ರಕಾರ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಭಾರತದ ಕಡೆಯಲ್ಲಿ ಚೀನಾದ ಸೈನ್ಯವು ಇನ್ನೂ ಇದೆ ಎಂದು ಕಿಡಿಕಾರಿದ್ದಾರೆ.

'ಎಲ್‌ಎಸಿಯ ಭಾರತದ ಭಾಗದ 1.5 ಕಿ.ಮೀ ದೂರದಲ್ಲಿ ಚೀನಾದ ಸೈನ್ಯವು ಇನ್ನೂ ಇದೆ ಎಂದು ಭಾರತದ ಭದ್ರತಾ ಸಂಸ್ಥೆಗಳು ಅಂದಾಜಿಸಿವೆ (ಭಾರತದ ಗ್ರಹಿಕೆಗೆ ಅನುಗುಣವಾಗಿ). ಮೇ ತಿಂಗಳಲ್ಲಿ, ಚೀನಾದ ಸೈನ್ಯವು ನಮ್ಮ ಎಲ್‌ಎಸಿಯ ಬದಿಯಲ್ಲಿ 5 ಕಿ.ಮೀ.ವರೆಗೆ ಒಳನುಗ್ಗಿದೆ' ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

'ಭಾರತದ ಭೂಪ್ರದೇಶಕ್ಕೆ ಯೊರೊಬ್ಬರು ಒಳನುಗ್ಗಿಲ್ಲ ಮತ್ತು ಯಾರೂ ಕೂಡ ಭಾರತದ ಭೂಪ್ರದೇಶದೊಳಗೆ ಇಲ್ಲ' ಎಂಬ ಎಲ್ಲಾ ಮಾತುಗಳು ಕೇವಲ ಖಾಲಿ ವಾಕ್ಚಾತುರ್ಯವಾಗಿವೆ. ಭಾರತದ ಭೂಪ್ರದೇಶದ ಒಂದು ಇಂಚನ್ನು ಕೂಡ ಯಾರು ಸ್ಪರ್ಶಿಸಲು ಸಾಧ್ಯವಿಲ್ಲ ಎನ್ನುವುದು ಹೆಚ್ಚಿನ ವಾಕ್ಚಾತುರ್ಯವಷ್ಟೇ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ವಾಸ್ತವ ಒಪ್ಪಿಕೊಳ್ಳುವ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕು. ಇಲ್ಲದಿದ್ದರೆ ಯಥಾಸ್ಥಿತಿ ಕಾಪಾಡಿಕೊಳ್ಳುವ ಮೌಲಕ ವಾಸ್ತವ ನಿಯಂತ್ರಣ ರೇಖೆಯವರೆಗಿನ ಭೂಸ್ವಾಮ್ಯ ಪ್ರತಿಪಾದಿಸುವುದು ಕಷ್ಟವಾಗುತ್ತದೆ. ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂಬ ಆಶಯ ಈಡೇರಲು ವಾಸ್ತವ ಒಪ್ಪಿಕೊಳ್ಳುವುದು ಮುಖ್ಯ ಎಂದು ಚಿದಂಬರಂ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT