ಭಾನುವಾರ, ಜನವರಿ 17, 2021
19 °C

ಎಂಎನ್‌ಸಿ ಕೆಲಸ ಕಳೆದುಕೊಂಡ ಯುವತಿಗೆ ಹೊಸ ಉದ್ಯೋಗ ಕೊಡಿಸಿದ ನಟ ಸೋನು ಸೂದ್‌

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ತೆಲಂಗಾಣ: ಕೊರೊನಾ ಲಾಕ್‌ಡೌನ್‌ನಿಂದ ಕೆಲಸ ಕೆಳೆದುಕೊಂಡು ತರಕಾರಿ ಮಾರಾಟದಲ್ಲಿ ತೊಡಗಿದ್ದ 26 ವರ್ಷದ ಯುವತಿಗೆ ನಟ ಸೋನು ಸೂದ್‌ ಕೆಲಸ ಕೊಡಿಸಿದ್ದಾರೆ.

ಲಾಕ್‌ಡೌನ್‌ನಿಂದ ಉಂಟಾದ ಆರ್ಥಿಕ ನಷ್ಟವು ದೇಶದಾದ್ಯಂತ ಸಾವಿರಾರು ಜನರು ತಮ್ಮ ಉದ್ಯೋಗ ಕಳೆದುಕೊಳ್ಳಲು ಕಾರಣವಾಗಿದೆ. 

ಹೈದರಾಬಾದ್‌ ಮೂಲದ ಶಾರದಾ ಅವರು ಎಂಎನ್‌ಸಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಕಂಪೆನಿ ಉದ್ಯೋಗಿಗಳಿಗೆ ಸಂಬಳ ಕೊಡಲು ಸಾಧ್ಯವಿಲ್ಲ, ನಷ್ಟದಲ್ಲಿರುವುದಾಗಿ ಘೋಷಿಸಿ ಬಾಗಿಲು ಮುಚ್ಚಿತ್ತು. 

ತೀವ್ರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಭರವಸೆ ಕಳೆದುಕೊಳ್ಳುವ ಬದಲು ತನ್ನ ಕುಟುಂಬ ಪೋಷಿಸಲು ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡಲು ಶಾರದಾ ಮುಂದಾಗಿದ್ದರು. ಇತ್ತೀಚಿಗೆ ಶಾರದಾ ಅವರ ಕುರಿತಾದ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ನಟ ಸೋನು ಸೂದ್‌ ಗಮನ ಸೆಳೆದಿವೆ.

ರಿಚ್ಚಿ ಶೆಲ್ಸನ್ ಎಂಬುವರು ಟ್ವಿಟರ್‌ನಲ್ಲಿ ಸೋನು ಸೂದ್‌ಗೆ ಟ್ಯಾಗ್‌ ಮಾಡಿದ್ದು, ಟೆಕ್ಕಿಗೆ ಸಹಾಯ ಮಾಡುವಂತೆ ಕೇಳಿದ್ದರು. ಸದ್ಯ ಪ್ರತಿಕ್ರಿಯಿಸಿರುವ ಸೂದ್‌, ತಾವು ಈಗಾಗಲೇ ಶಾರದಾರನ್ನು ಮಾತನಾಡಿದ್ದು, ಕೆಲಸ ಸಿಕ್ಕಿರುವುದಾಗಿ ತಿಳಿಸಿದ್ದಾರೆ. 

ನಟ ಸೋನು ಸೂದ್‌, ನಟನೆಗಿಂತ ಹೆಚ್ಚಾಗಿ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೇ ಹೆಚ್ಚು ಸುದ್ದಿಯಾದವರು. ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರಿಗೆ ಊಟ, ವಸತಿ ಒದಗಿಸಿದ್ದು, ಕಾರ್ಮಿಕರನ್ನು ಬಸ್ಸು, ರೈಲು, ವಿಮಾನಗಳ ಮೂಲಕ ಅವರವರ ಊರುಗಳಿಗೆ ತಲುಪಿಸಿದ್ದು ಇಂತಹ ಹಲವು ಸೇವೆಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ.

ಇದನ್ನೂ ಓದಿ... ಆಂಧ್ರದ ಬಡರೈತನಿಗೆ ಟ್ರ್ಯಾಕ್ಟರ್‌ ಕೊಡಿಸಿದ ನಟ ಸೋನು ಸೂದ್  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು