ಅಮೆರಿಕದ ಸರಕುಗಳಿಗೆ ಸುಂಕ ಹೆಚ್ಚಿಸಿರುವುದನ್ನು ಭಾರತ ಹಿಂಪಡೆಯಬೇಕು: ಟ್ರಂಪ್

ಗುರುವಾರ , ಜೂಲೈ 18, 2019
23 °C
ಜಿ20 ಸಮಾವೇಶ: ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಹೇಳಿಕೆ

ಅಮೆರಿಕದ ಸರಕುಗಳಿಗೆ ಸುಂಕ ಹೆಚ್ಚಿಸಿರುವುದನ್ನು ಭಾರತ ಹಿಂಪಡೆಯಬೇಕು: ಟ್ರಂಪ್

Published:
Updated:

ಒಸಾಕ (ಜಪಾನ್): ಅಮೆರಿಕದ ಸರಕುಗಳಿಗೆ ಸುಂಕ ಹೆಚ್ಚಿಸಿರುವುದನ್ನು ಭಾರತ ಹಿಂಪಡೆಯಬೇಕು ಎಂದು ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಹಿಸಿದ್ದಾರೆ.

ಜಪಾನ್‌ನಲ್ಲಿ ನಡೆಯಲಿರುವ ಜಿ20 ಸಮಾವೇಶದ ಸಂದರ್ಭ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಟ್ರಂಪ್ ಮಾತುಕತೆ ನಡೆಸಲಿದ್ದಾರೆ. ಈ ವೇಳೆ, ಸುಂಕ ಹೆಚ್ಚಳದ ವಿಚಾರ ಪ್ರಸ್ತಾಪಿಸುವುದಾಗಿ ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ಜಿ20 ಸಮಾವೇಶಕ್ಕಾಗಿ ಜಪಾನ್‌ ತಲುಪಿದ ನರೇಂದ್ರ ಮೋದಿ: ಟ್ರಂಪ್ ಸೇರಿ ಹಲವರ ಭೇಟಿ​

‘ಕೆಲವು ವರ್ಷಗಳಿಂದ ಭಾರತವು ಅಮೆರಿಕದ ಸರಕುಗಳಿಗೆ ಹೆಚ್ಚಿನ ಸುಂಕ ವಿಧಿಸುತ್ತಿದೆ. ಈಚೆಗೆ ಸುಂಕವನ್ನು ಮತ್ತೂ ಹೆಚ್ಚಿಸಲಾಗಿದೆ. ಇದನ್ನು ಒಪ್ಪಲಾಗದು. ಸುಂಕ ಹೆಚ್ಚಳವನ್ನು ವಾಪಸ್ ಪಡೆಯಬೇಕು’ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕದ ಮೋಟಾರುಸೈಕಲ್‌ಗಳ ಮೇಲಿನ ಸುಂಕ ಹೆಚ್ಚಳದ ಬಗ್ಗೆಯೂ ಈಚೆಗೆ ಟ್ರಂಪ್ ವಿರೋಧ ವ್ಯಕ್ತ‍ಪಡಿಸಿದ್ದರು.

‘ಅಮೆರಿಕವು ಮೂರ್ಖ ರಾಷ್ಟ್ರವಲ್ಲ, ಹೆಚ್ಚು ಸಮಯ ನಮ್ಮನ್ನು ಮೂರ್ಖರನ್ನಾಗಿ ಮಾಡಲಾಗದು. ಭಾರತವು ನಮ್ಮ ಉತ್ತಮ ಮಿತ್ರರಾಷ್ಟ್ರ. ಅವರು ನಮ್ಮ ಮೋಟಾರುಸೈಕಲ್‌ಗಳ ಮೇಲೆ ಶೇ 100ರಷ್ಟು ತೆರಿಗೆ ವಿಧಿಸುತ್ತಿದ್ದಾರೆ. ನಾವು ಅವರ ಸರಕುಗಳಿಗೆ ಸುಂಕ ವಿಧಿಸುತ್ತಿಲ್ಲ’ ಎಂದು ಸಿಬಿಎಸ್‌ ನ್ಯೂಸ್‌ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದಾರೆ.

ಭಾರತವನ್ನು ‘ಸುಂಕಗಳ ರಾಜ’ ಎಂದೂ ಟ್ರಂಪ್ ಈಚೆಗೆ ಬಣ್ಣಿಸಿದ್ದರು.

ಇದನ್ನೂ ಓದಿ: ಭಾರತ ಸುಂಕಗಳ ರಾಜ: ಡೊನಾಲ್ಡ್ ಟ್ರಂಪ್ ಆರೋಪ​

ಅಮೆರಿಕದ 29 ಸರಕುಗಳ ಮೇಲೆ ಹೆಚ್ಚುವರಿ ಕಸ್ಟಮ್ಸ್‌ ಸುಂಕ ವಿಧಿಸಲು ಭಾರತ ಇತ್ತೀಚೆಗೆ ನಿರ್ಧಾರ ಕೈಗೊಂಡಿತ್ತು. ಜೂನ್ 16ರಿಂದ ಇದು ಜಾರಿಗೆ ಬಂದಿದೆ. ಅಮೆರಿಕವು ಆದ್ಯತಾ ವ್ಯಾಪಾರ ಒಪ್ಪಂದದಡಿ (ಜಿಎಸ್‌ಪಿ) ಭಾರತಕ್ಕೆ ನೀಡಿದ್ದ ರಫ್ತು ಉತ್ತೇಜನಾ ಕೊಡುಗೆ ರದ್ದು ಮಾಡಲು ನಿರ್ಧರಿಸಿದ್ದರಿಂದ ಭಾರತವೂ ಪ್ರತೀಕಾರ ಸುಂಕ ವಿಧಿಸಿದೆ.

ಇನ್ನಷ್ಟು...

ಅಮೆರಿಕದ 29 ಸರಕಿಗೆ ಪ್ರತೀಕಾರ ಸುಂಕ

ಗರಿಷ್ಠ ತೆರಿಗೆ ವಿಧಿಸುವ ಭಾರತ: ಟ್ರಂಪ್‌ ಕಿಡಿ

‘ಭಾರತಕ್ಕೆ ಅಮೆರಿಕ ನೀಡಿದ್ದ ಆದ್ಯತಾ ವ್ಯಾಪಾರ ಮಾನ್ಯತೆ ರದ್ದು ದುರದೃಷ್ಟಕರ’

ಅಮೆರಿಕದ ‘ಶೂನ್ಯ ಆಮದು ತೆರಿಗೆ’ ವ್ಯಾಪ್ತಿಯಿಂದ ಭಾರತ ಹೊರಕ್ಕೆ?

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !