ಶನಿವಾರ, ಮೇ 30, 2020
27 °C

ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ರಷ್ಯಾ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಬ್ರೆಜಿಲ್‌

ಪಿಟಿಐ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಬ್ರೆಜಿಲ್‌ ಶುಕ್ರವಾರ ರಷ್ಯಾವನ್ನು ಹಿಂದಿಕ್ಕಿದ್ದು, ಜಾಗತಿಕವಾಗಿ ಎರಡನೇ ಸ್ಥಾನಕ್ಕೇರಿದೆ. 

ಸದ್ಯ ಅಲ್ಲಿ 3,30,890 ಸೋಂಕಿತರಿದ್ದು 21,048 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಆದರೆ, ಸಾವಿನ ಅಸಲಿ ಸಂಖ್ಯೆ ಅಧಿಕೃತ ಸಂಖ್ಯೆಗಿಂತಲೂ ಹೆಚ್ಚಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  ಇನ್ನೊಂದೆಡೆ ರಷ್ಯಾದಲ್ಲಿ 3,26,448 ಸೋಂಕಿತರಿದ್ದು, 3,249 ಮಂದಿ ಮೃತಪಟ್ಟಿದ್ದಾರೆ. 

ಬ್ರೆಜಿಲ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 1001 ಸಾವು ಸಂಭವಿಸಿದೆ. ಹೀಗಾಗಿ, ವೈರಸ್ ಹರಡುವುದನ್ನು ತಡೆಯಲು ಪರಿಚಯಿಸಲಾದ ನಿರ್ಬಂಧ ಕ್ರಮಗಳನ್ನು ಇನ್ನು ಮುಂದೆ ಸಡಿಲಗೊಳಿಸಬೇಕೋ ಅಥವಾ ಕಠಿಣವಾಗಿ ಜಾರಿಗೊಳಿಸಬೇಕೋ ಎಂಬ ಚರ್ಚೆಗಳು ಬ್ರೆಜಿಲ್‌ನಾದ್ಯಂತ ಚರ್ಚೆಗೆ ಒಳಗಾಗಿದೆ. 

ಸದ್ಯ ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಅಲ್ಲಿ 16,01,434 ಸೋಂಕಿತರಿದ್ದು, 96,007 ಮಂದಿ ಮೃತಪಟ್ಟಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು