ಮಂಗಳವಾರ, ಫೆಬ್ರವರಿ 18, 2020
30 °C
ಸಂಚಾರಕ್ಕೆ ನಿರ್ಬಂಧ

ಚೀನಾ: ಕೊರೊನಾ ವೈರಸ್‌ಗೆ 17 ಬಲಿ, 600 ಜನರಿಗೆ ಸೋಂಕು

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ವುಹಾನ್‌/ಬೀಜಿಂಗ್‌: ಗಂಭೀರ ಸ್ವರೂಪದ ಕೊರೊನಾ ವೈರಸ್‌ ಭೀತಿ ಚೀನಾದಲ್ಲಿ ಹೆಚ್ಚಿದ್ದು, ಸೋಂಕು ವ್ಯಾಪಿಸುವುದನ್ನು ತಡೆಯಲು ಎರಡು ಪ್ರಮುಖ ನಗರಗಳಿಂದ ಹೊರಗೆ ಹೋಗದಂತೆ ಜನ, ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಕೊರೊನಾ ವೈರಸ್‌ಗೆ ಇದುವರೆಗೂ ಸುಮಾರು 17 ಜನರು ಬಲಿಯಾಗಿದ್ದಾರೆ. ಮೊದಲಿಗೆ ವೈರಸ್‌ ಕಡಲತೀರದ ನಗರಿ ವುಹಾನ್‌ನಲ್ಲಿ ಕಾಣಿಸಿಕೊಂಡಿದ್ದು, ವಿವಿಧ ರಾಷ್ಟ್ರಗಳಿಗೂ ವ್ಯಾಪಿಸಿದೆ. 

ಎರಡು ನಗರಗಳಲ್ಲಿ ಒಟ್ಟು ಜನಸಂಖ್ಯೆ ಸುಮಾರು 2 ಕೋಟಿ. ವುಹಾನ್‌ ಮತ್ತು ಹುವಾನ್‌ಗಾಂಗ್‌ ನಗರಗಳಿಂದ ವಿಮಾನ, ರೈಲು ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ.

ವುಹಾನ್‌ನ ಜನಸಂಖ್ಯೆ ಸುಮಾರು 1.10 ಕೋಟಿ ಇದ್ದರೆ, ಹುವಾನ್‌ಗಾಂಗ್‌ನ ಜನಸಂಖ್ಯೆ ಸುಮಾರು 80 ಲಕ್ಷ. ಜನರು ‘ವಿಶೇಷ ಕಾರಣಗಳಿಲ್ಲದೇ’ ನಿರ್ಗಮಿಸಬಾರದು ಎಂದು ಸೂಚಿಸಲಾಗಿದೆ. ಅಲ್ಲದೆ, ವಾಣಿಜ್ಯ ಚಟುವಟಿಕೆಗಳೂ ಕುಗ್ಗಿವೆ. ಸಿನಿಮಾ ಮಂದಿರ, ಇಂಟರ್‌ನೆಟ್‌ಕೆಫೆಗಳು ಬಂದ್ ಆಗಿವೆ.

ಎಜೌ ನಗರದಲ್ಲಿಯೂ ಮುಂಜಾಗ್ರತೆಯಾಗಿ ರೈಲು ಸಂಚಾರವನ್ನು ನಿರ್ಬಂಧಿಸಲಾಗಿದೆ. ‘ವಿಶ್ವವೇ ಅಂತ್ಯವಾದ ಭಾವನೆ ನಮ್ಮನ್ನು ಕಾಡುತ್ತಿದೆ’ ಎಂದು ವುಹಾನ್‌ ನಿವಾಸಿಯೊಬ್ಬರು ವಿಬೊ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಇನ್ನೊಂದೆಡೆ, ಬೀಜಿಂಗ್‌ನಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಒಂದು ಕಡೆ ಗುಂಪುಗೂಡುವುದನ್ನು ನಿರ್ಬಂಧಿಸಿ ಸ್ಥಳೀಯ ಸರ್ಕಾರ ಆದೇಶ ಹೊರಡಿಸಿದೆ.

ಮುಖಗವುಸಿಗೆ ಹೆಚ್ಚಿದ ಬೇಡಿಕೆ: ವೈರಸ್‌ ಸೋಂಕು ಹಬ್ಬುತ್ತಿರುವುದರಿಂದ ಚೀನಾದಲ್ಲಿ ಮುಖಗವುಸುಗಳಿಗೂ ಬೇಡಿಕೆ ಹೆಚ್ಚಿದೆ. ಮುಖಗವುಸು ತಯಾರಕರು ರಾಷ್ಟ್ರೀಯ ರಜೆಗಾಗಿ ಕಾರ್ಖಾನೆಗಳನ್ನು ಮುಚ್ಚಿದ್ದರು. ಆದರೆ, ಬೇಡಿಕೆ ಹೆಚ್ಚಿದ್ದರಿಂದ ಮತ್ತೆ ಕಾರ್ಖಾನೆಗಳನ್ನು ತೆರೆದಿದ್ದು, ಕಾರ್ಮಿಕರಿಗೆ ನಾಲ್ಕು ಪಟ್ಟು ವೇತನ ನೀಡುವುದಾಗಿ ಮಾಲೀಕರು ಹೇಳಿದ್ದಾರೆ.

ವೈರಸ್ ಮೂಲ ಹಾವು, ಬಾವಲಿ?
ಕೊರೊನಾ ವೈರಸ್‌ ಹಾವುಗಳ ಮೂಲಕ ಮನುಷ್ಯನಿಗೆ ತಗುಲಿರಬಹುದು ಎಂದು ಸ್ಥಳೀಯ ವಿಜ್ಞಾನಿಗಳು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಈ ಮಾಹಿತಿಯು ವೈರಸ್‌ ಇನ್ನಷ್ಟು ವ್ಯಾಪಿಸದಂತೆ ತಡೆಯಲು ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳನ್ನು ರೂಪಿಸಲು ಸಹಕಾರಿ ಆಗಬಹುದು ಎಂದು ಹೇಳಲಾಗಿದೆ. ಚೀನಾದ ಪೆಕಿಂಗ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕೇಂದ್ರದ ವಿಜ್ಞಾನಿ ವ್ಹೇ ಜಿ, ‘ಸೋಂಕು ಪೀಡಿತರಲ್ಲಿ ಹೆಚ್ಚಿನವರು ಕೋಳಿ, ಹಾವು, ಬಾವಲಿ, ಸೀಫುಡ್‌, ಬಾವಲಿಗಳನ್ನು ಮಾರಾಟ ಮಾಡುವ ಮಾರುಕಟ್ಟೆಗೆ ಭೇಟಿ ನೀಡಿದ್ದವರು‘ ಎಂದು ಹೇಳಿದರು.

ಕೊರೊನಾ ವೈರಸ್‌ನ ವಂಶವಾಹಿ ಅಂಶವನ್ನು ಕುರಿತು ವಿಶ್ವದ ಇತರೆಡೆ ಕಾಣಿಸಿಕೊಂಡಿದ್ದ ವೈರಸ್‌ಗಳ ಅಂಶದ ಜೊತೆಗೂಡಿ ವಿಶ್ಲೇಷಣೆ ಮಾಡಿದ್ದು, ಈಗ ಕಾಣಿಸಿಕೊಂಡಿರುವ ಬಾವಲಿಯಲ್ಲಿಯೂ ಇವೆ ಎಂಬುದನ್ನು ಗುರುತಿಸಿದ್ದಾರೆ.

ಮುಖಗವುಸುಗಳಿಗೆ ಹೆಚ್ಚು ಬೇಡಿಕೆ
ಕೊರೊನಾ ವೈರಸ್‌ ಸೋಂಕು ಹಬ್ಬುತ್ತಿರುವುದರಿಂದ ಚೀನಾದಲ್ಲಿ ಮುಖಗವುಸುಗಳಿಗೂ ಬೇಡಿಕೆ ಹೆಚ್ಚಿದೆ. ಮುಖಗವುಸು ತಯಾರಕರು ರಾಷ್ಟ್ರೀಯ ರಜೆಗಾಗಿ ಕಾರ್ಖಾನೆಗಳನ್ನು ಮುಚ್ಚಿದ್ದರು. ಆದರೆ, ಬೇಡಿಕೆ ಹೆಚ್ಚಿದ್ದರಿಂದ ಮತ್ತೆ ಕಾರ್ಖಾನೆಗಳನ್ನು ತೆರೆದಿದ್ದು, ಕಾರ್ಮಿಕರಿಗೆ ನಾಲ್ಕು ಪಟ್ಟು ವೇತನ ನೀಡುವುದಾಗಿ ಮಾಲೀಕರು ಹೇಳಿದ್ದಾರೆ.

‘ದೇಶದ ಎಲ್ಲ ಆಸ್ಪತ್ರೆಗಳಲ್ಲಿ ಮುಖಗವುಸುಗಳ ಅಪಾರ ಕೊರತೆ ಇದೆ’ ಎಂದು ನಿಂಗ್ಬೊ ನಗರದ ಕಾರ್ಖಾನೆ ವ್ಯವಸ್ಥಾಪಕ ಜುನ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು