ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ತಲುಪಿದ ಹೈಡ್ರಾಕ್ಸಿಕ್ಲೋರೋಕ್ವಿನ್‌: ಭಾರತೀಯ ರಾಯಭಾರಿ ಟ್ವೀಟ್‌

Last Updated 12 ಏಪ್ರಿಲ್ 2020, 3:21 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತ ರವಾನಿಸಿದಹೈಡ್ರಾಕ್ಸಿಕ್ಲೋರೋಕ್ವಿನ್‌ ಔಷಧಿ ನ್ಯೂಜೆರ್ಸಿಯ ನೆವಾರ್ಕ್‌ ವಿಮಾನ ನಿಲ್ದಾಣಕ್ಕೆ ತಲುಪಿದೆ ಎಂದು ಅಮೆರಿಕದ ಭಾರತೀಯರಾಯಭಾರಿ ತರಂಜಿತ್‌ ಸಿಂಗ್‌ ಸಂಧು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಕೋವಿಡ್‌–19 ವಿರುದ್ಧ ಹೋರಾಟ ನಡೆಸುವ ಉದ್ದೇಶದಿಂದ ಮಿತ್ರ ರಾಷ್ಟ್ರ ಅಮೆರಿಕಕ್ಕೆ ಭಾರತ ಬೆಂಬಲ ಸೂಚಿಸಿದ್ದು, ಹೈಡ್ರಾಕ್ಸಿಕ್ಲೋರೋಕ್ವಿನ್‌ ಔಷಧಿ ಇಂದು ನೆವಾರ್ಕ್‌ ವಿಮಾನ ನಿಲ್ದಾಣಕ್ಕೆ ತಲುಪಿದೆ’ ಎಂದು ಹೇಳಿದ್ದಾರೆ.

ಇತ್ತೀಚಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಲೇರಿಯಾ ನಿರೋಧಕ ಹೈಡ್ರಾಕ್ಸಿಕ್ಲೊರೊಕ್ವಿನ್ ಮಾತ್ರೆಗಳನ್ನು ರಫ್ತು ಮಾಡುವಂತೆ ಬೇಡಿಕೆ ಇಟ್ಟಿದ್ದರು. ಇದೀಗ ಅಮೆರಿಕದ ಬೇಡಿಕೆಗೆ ಭಾರತ ಸ್ಪಂದಿಸಿದೆ.

ಹೈಡ್ರಾಕ್ಸಿಕ್ಲೊರೊಕ್ವಿನ್ ಮಾತ್ರೆಗಳು ಕೊರೊನಾ ವೈರಸ್ಸನ್ನು ಹಿಮ್ಮೆಟ್ಟಿಸಲು ಪರಿಣಾಮಕಾರಿಎಂದು ಹೇಳಲಾಗುತ್ತಿದೆ.

‌‘ಅಸಾಧಾರಣ ಸಂದರ್ಭದಲ್ಲಿ ಸ್ನೇಹಿತರ ನಡುವೆ ಇನ್ನೂ ಹೆಚ್ಚಿನ ಸಹಕಾರದ ಅಗತ್ಯವಿದೆ. ಎಚ್‌ಸಿಕ್ಯೂ ರವಾನಿಸುವ ನಿರ್ಧಾರಕೈಗೊಂಡ ಭಾರತೀಯರಿಗೆಧನ್ಯವಾದಗಳು. ಇದನ್ನುಮರೆಯಲಾಗುವುದಿಲ್ಲ! ಈ ಹೋರಾಟದಲ್ಲಿ ಭಾರತಕ್ಕೆ ಮಾತ್ರವಲ್ಲ, ಮಾನವೀಯತೆ ದೃಷ್ಠಿಯಿಂದ ಸಹಾಯ ಮಾಡಿದ ಪ್ರಬಲ ನಾಯಕತ್ವದ ಪಿಎಂ ಮೋದಿ ಅವರಿಗೂಧನ್ಯವಾದಗಳು!’ ಎಂದು ಡೊನಾಲ್ಡ್‌ ಟ್ರಂಪ್‌ ಟ್ವೀಟ್ ಮಾಡಿದ್ದಾರೆ.

ಅಮೆರಿಕದಲ್ಲಿ ಈ ವರೆಗೆ 20,577 ಮಂದಿ ಕೋವಿಡ್‌–19 ನಿಂದ ಮೃತಪಟ್ಟಿದ್ದಾರೆ. ಅಲ್ಲಿನ ಸೋಂಕಿತರ ಸಂಖ್ಯೆ ಸದ್ಯ 532,879 ಆಗಿದೆ. ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಮೆರಿಕ ಜಗತ್ತಿನಲ್ಲೇ ಭಾರಿ ಮುಂದಿದೆ. ಅಲ್ಲಿ ಈ ವರೆಗೆ 30,453 ಮಂದಿ ಗುಣಮುಖರಾಗಿದ್ದಾರೆ.

ಕೊರೊನಾ ವೈರಸ್‌ ಸೋಂಕಿನಿಂದ ಉಂಟಾದ ಸಾವಿನ ಸಂಖ್ಯೆಯಲ್ಲಿ ಅಮೆರಿಕ ಇಟಲಿಯನ್ನು ಹಿಂದಿಕ್ಕಿದೆ. ಅದರೊಂದಿಗೆ ಅಮೆರಿಕದಲ್ಲಿ ಮಹಾಮಾರಿಗೆ ಜಗತ್ತಿನ ಇತರೆಲ್ಲ ರಾಷ್ಟ್ರಗಳಿಗಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT