ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ ದಾಟಿದ ಸಾವಿನ ಸಂಖ್ಯೆ, ಅರ್ಥ ವ್ಯವಸ್ಥೆಗೆ ಆಘಾತ

ಜಗತ್ತಿನಾದ್ಯಂತ ಭಾರಿ ಸಾವು–ನೋವು
Last Updated 10 ಏಪ್ರಿಲ್ 2020, 21:55 IST
ಅಕ್ಷರ ಗಾತ್ರ
ADVERTISEMENT
""

ರೋಮ್‌: ಕೊರೊನಾ ವೈರಾಣುವಿನ ಉಪಟಳ ಆರಂಭವಾಗಿ ನೂರು ದಿನಗಳಾಗಿವೆ. ಇಡೀ ಜಗತ್ತನ್ನೇ ಸ್ತಬ್ಧಗೊಳಿಸಿರುವ ವೈರಾಣುವಿಗೆ ಬಲಿಯಾದವರ ಸಂಖ್ಯೆ ಶುಕ್ರವಾರದ ಹೊತ್ತಿಗೆ 1,00,376ಕ್ಕೆ ಏರಿದೆ.

ಜಗತ್ತಿನ ಬಹುಭಾಗದಲ್ಲಿ ವ್ಯಾಪಾರ ಚಟುವಟಿಕೆ ಮತ್ತು ಜನ ಸಂಚಾರವನ್ನು ನಿಲ್ಲಿಸಲಾಗಿದ್ದರೂ 16.19 ಲಕ್ಷ ಮಂದಿ ಸೋಂಕಿಗೆ ಒಳಗಾಗಿದ್ದಾರೆ. 1930ನೇ ದಶಕದಲ್ಲಿ ಕಾಣಿಸಿಕೊಂಡ ಮಹಾ ಆರ್ಥಿಕ ಹಿಂಜರಿತದ ಬಳಿಕ ಜಗತ್ತು ಕಂಡ ಅತ್ಯಂತ ದೊಡ್ಡ ಆರ್ಥಿಕ ಆಘಾತ ಇದು ಎಂದು ಅಂತರ
ರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್‌) ಎಚ್ಚರಿಸಿದೆ.

ಚೀನಾದಲ್ಲಿ ಮೊದಲು ಪತ್ತೆಯಾದ ಈ ಸೋಂಕಿಗೆ ಅಮೆರಿಕ ಮತ್ತು ಇಟಲಿ ದೇಶಗಳು ತೀವ್ರವಾಗಿ ತತ್ತರಿಸಿವೆ. ಅಮೆರಿಕದಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 4.67 ಲಕ್ಷಕ್ಕೆ ಏರಿಕೆಯಾಗಿದೆ. ಶುಕ್ರವಾರದ ವರೆಗೆ ಒಟ್ಟು ಸಾವಿನ ಸಂಖ್ಯೆ ಅಲ್ಲಿ17,925ಕ್ಕೆ ಏರಿದೆ. ಅಮೆರಿಕದಲ್ಲಿ 1.7 ಕೋಟಿ ಜನರು ಕೆಲಸ ಕಳೆದುಕೊಂಡಿದ್ದಾರೆ. ಸೋಂಕಿಗೆ ಅತಿ ಹೆಚ್ಚು ಜನರು ಇಟಲಿಯಲ್ಲಿ ಬಲಿಯಾಗಿದ್ದಾರೆ. ಅಲ್ಲಿ ಸತ್ತವರ ಸಂಖ್ಯೆ 18,849.

ಸೋಂಕಿಗೆ ಅತಿ ಹೆಚ್ಚು ಜನರು ಪ್ರಾಣತೆತ್ತ ಮೂರನೇ ದೇಶ ಸ್ಪೇನ್‌. ಆದರೆ, ಅಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಶುಕ್ರವಾರ ಅಲ್ಲಿ 17 ದಿನಗಳಲ್ಲೇ ಕಡಿಮೆ ಸಾವಿನ ಪ್ರಕರಣಗಳು ವರದಿಯಾಗಿವೆ.

‘ಸಾಮುದಾಯಿಕ ಪಸರಿಸುವಿಕೆ ಇಲ್ಲ’: ದೇಶದಲ್ಲಿ ಕೊರೊನಾ ಸೋಂಕು ಸಾಮುದಾಯಿಕ ಪಸರಿಸುವಿಕೆ ಮಟ್ಟಕ್ಕೆ ತಲುಪಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಪುನರುಚ್ಚರಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದನ್ನು ದೃಢಪಡಿಸಿದೆ. ಕ್ಲಸ್ಟರ್‌ಗಳಲ್ಲಷ್ಟೇ ಸೋಂಕು ಹರಡುವಿಕೆ ಇದೆ ಎಂದು ಹೇಳಿದೆ. ಇದು ಸಾಮುದಾಯಿಕ ಹರಡುವಿಕೆಗಿಂತ ಮೊದಲಿನ ಹಂತ ಎಂದು ಹೇಳಲಾಗಿದೆ.

ಇದೇ 14ರವರೆಗೆ ಹೇರಲಾಗಿದ್ದ ದಿಗ್ಬಂಧನ ಮುಂದುವರಿಸುವ ಬಗ್ಗೆ ಅಭಿಪ್ರಾಯ ತಿಳಿಸುವಂತೆ ರಾಜ್ಯ ಸರ್ಕಾರ
ಗಳನ್ನು ಕೇಂದ್ರ ಸರ್ಕಾರ ಕೋರಿದೆ.

ಲಾಕ್‌ಡೌನ್‌: ಕೇಂದ್ರಕ್ಕೆ ರಾಜ್ಯಗಳ ಸಲಹೆ

ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ನೀಡಬೇಕು

ರಾಜ್ಯದ ಆದಾಯ ಹೆಚ್ಚಿಸುವುದಕ್ಕಾಗಿ ಮದ್ಯ ಮಾರಾಟಕ್ಕೆ ಅನುಮತಿ

ಸರಿ–ಬೆಸ ನೋಂದಣಿ ಸಂಖ್ಯೆಯ ಖಾಸಗಿ ವಾಹನಗಳಿಗೆ ದಿನ ಬಿಟ್ಟು ದಿನ ಅವಕಾಶ

ಸಾರ್ವಜನಿಕ ಸಾರಿಗೆ, ರೈಲು, ವಿಮಾನ ಸೇವೆ ಪುನರಾರಂಭಿಸಬಾರದು

ರಾಜ್ಯ ಗಡಿಗಳನ್ನು ಇನ್ನಷ್ಟು ಕಾಲ ತೆರೆಯಬಾರದು, ಸರಕುಗಳ ಸಾಗಾಟಕ್ಕೆ ಮಾತ್ರ ಅನುಮತಿ ನೀಡಬೇಕು

ಸೋಂಕು ಹರಡುವಿಕೆಗೆ ಸಂಬಂಧಿಸಿ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಮಾಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT