ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕಿನ ಹೊಸ ಹಾಟ್‌ಸ್ಪಾಟ್‌ ಆದ ಅಮೆರಿಕಾ: ಒಂದೇ ದಿನದಲ್ಲಿ 1,480 ಸಾವು

Last Updated 4 ಏಪ್ರಿಲ್ 2020, 4:35 IST
ಅಕ್ಷರ ಗಾತ್ರ

ವಾಸಿಂಗ್ಟನ್‌:ಚೀನಾ, ಇಟಲಿ, ಸ್ಪೇನ್‌ಗಳ ನಂತರ ಅಮೆರಿಕವನ್ನು ಕೊರೊನಾ ವೈರಸ್‌ ಸೋಂಕಿನ ಹಾಟ್‌ಸ್ಪಾಟ್‌ ಎಂದೇ ಕರೆಯಲಾಗುತ್ತಿದೆ.

ಅಮೆರಿಕದಲ್ಲಿ ಕಳೆದ 24 ಗಂಟೆಗಳಲ್ಲಿ 1,480 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಆ ಮೂಲಕ ಕೋವಿಡ್‌-19ಗೆ ಸಾವಿಗೀಡಾದವರ ಸಂಖ್ಯೆ 7, 406ಕ್ಕೆ ಏರಿದೆ.

ಕೊರೊನಾ ಸೋಂಕು ಹರಡುವಿಕೆ ವ್ಯಾಪಕವಾಗುತ್ತಿದ್ದು, 277,467 ಜನರಲ್ಲಿ ಕೋವಿಡ್‌-19 ಪತ್ತೆಯಾಗಿದೆ. ಈ ಬೆಳವಣಿಗಗಳು ಅಮೆರಿಕ ಸರ್ಕಾರವನ್ನು ತೀವ್ರ ಚಿಂತೆಗೀಡು ಮಾಡಿವೆ.

ಜಗತ್ತಿನಾದ್ಯಂತ ಕೊರೊನಾ ವೈರಸ್‌ ಸೋಂಕಿಗೆ ಬಲಿಯಾದವರ ಸಂಖ್ಯೆ 10, 99, 080 ದಾಟಿದ್ದು, ಅದರಲ್ಲಿ ಮೃತರಾದವರ ಸಂಖ್ಯೆ 59, 179ಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT