ಶನಿವಾರ, ಜೂನ್ 6, 2020
27 °C

Covid-19 World Update: ಹೊಸ ಕೇಂದ್ರಬಿಂದುವಾಗಿ ಮಾರ್ಪಟ್ಟ ಬ್ರೆಜಿಲ್‌

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಜಗತ್ತಿನಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗುತ್ತಲೇ ಇದ್ದು, ಈವರೆಗೂ ಒಟ್ಟು 54, 01,222 ಮಂದಿ ಕೋವಿಡ್-19 ಸೋಂಕಿತರಾಗಿದ್ದಾರೆ. 

ಜಾನ್ಸ್‌ ಹಾಪ್‌ಕಿನ್ಸ್ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ, ಕೊರೊನಾ ಸೋಂಕಿನಿಂದ 3,43,799 ಜನರು ಮೃತಪಟ್ಟಿದ್ದು ಅಮೆರಿಕ ಒಂದರಲ್ಲೇ 98,683 ಜನರು ಸಾವಿಗೀಡಾಗಿದ್ದಾರೆ. 

ಅಮೆರಿಕದಲ್ಲಿ ಅತಿಹೆಚ್ಚು ಅಂದರೆ 16, 66,828 ಕೋವಿಡ್‌-19 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 11, 21,231 ಪ್ರಕರಣಗಳು ಕ್ರಿಯಾಶೀಲವಾಗಿವೆ. 

ಬ್ರೆಜಿಲ್‌ ದೇಶವು ಕೊರೊನಾ ವೈರಸ್‌ ಸೋಂಕಿನ ಹೊಸ ಹಾಟ್‌ಸ್ಟಾಟ್‌ ಆಗಿ ಮಾರ್ಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,47,398ಕ್ಕೆ ತಲುಪಿದೆ. 22,013 ಜನರು ಸಾವಿಗೀಡಾಗಿದ್ದಾರೆ. 

ಕೊರೊನಾ ಸೋಂಕಿನಿಂದ ಇಟಲಿಯಲ್ಲಿ 32,735, ಸ್ಪೇನ್‌ನಲ್ಲಿ 28,678, ಇಂಗ್ಲೆಂಡ್‌ನಲ್ಲಿ 36,675, ಪ್ರಾನ್ಸ್‌ನಲ್ಲಿ 28,332 ಜನರು ಸಾವಗೀಡಾಗಿದ್ದಾರೆ.     
 
ಕೊರೊನಾ ವೈರಸ್‌ ಸೋಂಕು ಮೊದಲು ಕಾಣಿಸಿಕೊಂಡಿದ್ದ ಚೀನಾದಲ್ಲೀಗ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು