ಮಂಗಳವಾರ, ಜೂಲೈ 7, 2020
28 °C

Covid-19 World Update | ಇಂಗ್ಲೆಂಡ್‌ನಲ್ಲಿ 352 ಮಂದಿ ಸಾವು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌:  ಇಂಗ್ಲೆಂಡ್‌ನಲ್ಲಿ ಕೋವಿಡ್-19 ರೋಗ ಬಾಧಿಸಿದ್ದ 352 ಮಂದಿ ಸಾವಿಗೀಡಾಗಿದ್ದಾರೆ. 30 ಮತ್ತು 103 ವರ್ಷ ವಯಸ್ಸಿನ ನಡುವಿನ ರೋಗಿಗಳಾಗಿದ್ದಾರೆ ಇವರು ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಕೋವಿಡ್ ರೋಗದಿಂದ ಇಂಗ್ಲೆಡ್‌ನಲ್ಲಿ ಸಾವಿಗೀಡಾದವರ ಸಂಖ್ಯೆ 20,483 ಆಗಿದೆ.

ಇರಾನ್‌ನಲ್ಲಿ ಶುಕ್ರವಾರ ಸಾವಿಗೀಡಾದವರ ಸಂಖ್ಯೆ 63 ಆಗಿದ್ದು, ಸೋಂಕು ಪ್ರಕರಣ ಮತ್ತು ಕೋವಿಡ್-19 ರೋಗದಿಂದ ಸಂಭವಿಸುವ ಸಾವಿನ ಸಂಖ್ಯೆ ಕಡಿಮೆ ಆಗಿದೆ ಎಂದು ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಮಲೇಷ್ಯಾದಲ್ಲಿ  69 ಹೊಸ ಪ್ರಕರಣಗಳು ವರದಿಯಾಗಿದ್ದು ಒಂದು ಸಾವು ಸಂಭವಿಸಿದೆ. ಇಲ್ಲಿಯವರೆಗೆ ಸೋಂಕು ತಗುಲಿದವರ ಸಂಖ್ಯೆ 6,071 ಆಗಿದೆ.

ಪಾಕಿಸ್ತಾನದ ಸಂಸತ್ತಿನ ಸ್ಪೀಕರ್ ಫೈಸಲ್ ಈದಿ ಅವರಿಗ ಕೊರೊನಾ ಸೋಂಕು ದೃಢಪಟ್ಟಿದೆ. ಪಾಕಿಸ್ತಾನದಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು 16,817 ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 385 ಮಂದಿ ಸಾವಿಗೀಡಾಗಿದ್ದಾರೆ.

ರಷ್ಯಾದಲ್ಲಿ 7,933 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 114431 ತಲುಪಿದೆ.ಕಳೆದ 24 ಗಂಟೆಗಳಲ್ಲಿ 96 ಮಂದಿ ಸಾವಿಗೀಡಾಗಿದ್ದು ಒಟ್ಟು ಸಾವಿನ ಸಂಖ್ಯೆ 1,169 ಆಗಿದೆ.

ಜಾನ್  ಹಾಪ್ಕಿನ್ಸ್ ಕೊರೊನಾವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ ಜಗತ್ತಿನಲ್ಲಿ ಇಲ್ಲಿಯವರಿಗೆ 2,33,998 ಮಂದಿ ಸಾವಿಗೀಡಾಗಿದ್ದಾರೆ. ಇಟಲಿಯಲ್ಲಿ ಇಲ್ಲಿಯವರೆಗೆ 27,967 ಮಂದಿ ಸಾವಿಗೀಡಾಗಿದ್ದಾರೆ. ಬ್ರಿಟನ್‌ನಲ್ಲಿ ಸಾವಿನ ಸಂಖ್ಯೆ 26,771 ,ಸ್ಪೇನ್‌ನಲ್ಲಿ - 24,543  ಮತ್ತು ಫ್ರಾನ್ಸ್‌ನಲ್ಲಿ 24,376 ಮಂದಿ ಸಾವಿಗೀಡಾಗಿದ್ದಾರೆ.

 ವಿಶ್ವದಲ್ಲಿ ಸೋಂಕು ದೃಢಪಟ್ಟವರ ಸಂಖ್ಯೆ 32,76,373 ಆಗಿದೆ. ಈವರೆಗೆ ಅಮೆರಿಕದಲ್ಲಿ 1,070,032 ಮಂದಿಗೆ ಸೋಂಕು ದೃಢಪಟ್ಟಿದೆ.ಸ್ಪೇನ್‌ನಲ್ಲಿ  213435 ಮಂದಿಗೆ ಸೋಂಕು ದೃಢಪಟ್ಟಿದ್ದು, ಇಟಲಿಯಲ್ಲಿ ಸೋಂಕು ದೃಢಪಟ್ಟವರ ಸಂಖ್ಯೆ 205463 ಆಗಿದೆ.

ಅಮೆರಿಕದಲ್ಲಿ ಅತಿಹೆಚ್ಚು (10,95,210) ಸೋಂಕು ಪ್ರಕರಣಗಳು ವರದಿಯಾಗಿವೆ. ಒಟ್ಟು 63,861 ಜನರು ಮೃತಪಟ್ಟಿದ್ದಾರೆ. 1.5 ಲಕ್ಷ ಜನರು ಗುಣಮುಖರಾಗಿದ್ದಾರೆ. ಉಳಿದಂತೆ ಸ್ಪೇನ್‌ನಲ್ಲಿ 2,39,639, ಇಟಲಿಯಲ್ಲಿ 2,05,463 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಈ ಎರಡು ದೇಶಗಳಲ್ಲಿ ಕ್ರಮವಾಗಿ 24,543 ಮತ್ತು 27,967 ಜನರು ಜೀವಕಳೆದುಕೊಂಡಿದ್ದಾರೆ.

ನೆರೆಯ ಪಾಕಿಸ್ತಾನದಲ್ಲಿ 16,817 ಸೋಂಕಿತರಿದ್ದಾರೆ. ಅಲ್ಲಿ ಸಾವಿನ ಸಂಖ್ಯೆ 385ಕ್ಕೆ ಏರಿಕೆಯಾಗಿದೆ. ಫ್ರಾನ್ಸ್‌ನಲ್ಲಿ 1,67,178 ಮಂದಿಗೆ ಸೋಂಕು ತಗುಲಿದ್ದು, 24,376 ಜನರು ಮೃತಪಟ್ಟಿದ್ದಾರೆ. ಇಂಗ್ಲೆಂಡ್‌ನಲ್ಲಿ ಸೋಂಕಿತರ ಸಂಖ್ಯೆ 1.7 ಲಕ್ಷ ದಾಟಿದೆ. ಸಾವಿನ ಸಂಖ್ಯೆ 26,771 ಆಗಿದೆ.

ಭಾರತದಲ್ಲಿ 35 ಸಾವಿರಕ್ಕೂ ಹೆಚ್ಚು ಸೋಂಕಿತರಿದ್ದಾರೆ. ಇದರಲ್ಲಿ 8,888 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ 1,147 ಜನರು ಮೃತಪಟ್ಟಿದ್ದು, 25,007 ಸೋಂಕಿತರು ದೇಶದಾದ್ಯಂತ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸೋಂಕು ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಇದುವರೆಗೆ 82,874 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 4,633 ಜನರು ಮೃತಪಟ್ಟಿದ್ದಾರೆ. 77 ಸಾವಿರಕ್ಕೂ ಹೆಚ್ಚು ಜನರು ಗುಣಮುಖರಾಗಿರಾಗಿರುವುದಾಗಿ ವರದಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು