ಬುಧವಾರ, ಜನವರಿ 29, 2020
31 °C
ಅಮೆರಿಕದ ಸಂಸತ್‌ನಲ್ಲಿ ನಿರ್ಣಯ ಮಂಡಿಸಿದ ಸಂಸದೆ ಪ್ರಮೀಳಾ ಜೈಪಾಲ್‌

ಜಮ್ಮು ಕಾಶ್ಮೀರದಲ್ಲಿ ನಿರ್ಬಂಧ ತೆರವಿಗೆ ನಿರ್ಣಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಹನ ಜಾಲಗಳ ನಿರ್ಬಂಧವನ್ನು ತಕ್ಷಣದಲ್ಲೇ ತೆರವುಗೊಳಿಸಬೇಕು ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸಬೇಕು ಎಂದು ಆಗ್ರಹಿಸಿ, ಭಾರತೀಯ ಸಂಜಾತೆ, ಸಂಸದೆ ಪ್ರಮೀಳಾ ಜೈಪಾಲ್‌ ಅಮೆರಿಕದ ಸಂಸತ್‌ನಲ್ಲಿ ನಿರ್ಣಯ ಮಂಡಿಸಿದ್ದಾರೆ. 

‘ಭಾರತ ಸರ್ಕಾರವು ತಕ್ಷಣದಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಹನ ಜಾಲಗಳ ನಿರ್ಬಂಧ ತೆರವುಗೊಳಿಸಬೇಕು ಹಾಗೂ ಬಂಧನಗೊಳಿಸಿದವರನ್ನು ತಕ್ಷಣದಲ್ಲೇ ಬಿಡುಗಡೆಗೊಳಿಸಲು, ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸಲು ಆಗ್ರಹಿಸಿ ರಿಪಬ್ಲಿಕನ್‌ ಪಕ್ಷ‌ದ ಸಂಸದ ಸ್ಟೀವ್‌ ವ್ಯಾಟ್ಕಿನ್ಸ್‌ ಜತೆಗೂಡಿ ನಿರ್ಣಯ ಮಂಡಿಸಿದ್ದೇನೆ’ ಎಂದು ಶನಿವಾರ ತಡರಾತ್ರಿ ಜೈಪಾಲ್‌ ಹೇಳಿದ್ದಾರೆ. 

‘ಭಾರತ ಮತ್ತು ಅಮೆರಿಕದ ನಡುವಿನ ಬಾಂಧವ್ಯವನ್ನು ಸದೃಢಗೊಳಿಸುವುದಕ್ಕಾಗಿ ನಾನು ಹೋರಾಡಿದ್ದೇನೆ. ಹೀಗಾಗಿ ವಿಶೇಷ ಕಾಳಜಿ ನನಗಿದೆ. ಯಾವುದೇ ಆರೋಪಗಳಿಲ್ಲದೇ ಇದ್ದರೂ ಜನರ ಬಂಧನ, ಸಂವಹನ ಜಾಲಗಳ ನಿರ್ಬಂಧ, ಜಮ್ಮು ಕಾಶ್ಮೀರಕ್ಕೆ ನಿಯೋಗಗಳ ಭೇಟಿಗೆ ಅವಕಾಶ ಕಲ್ಪಿಸದೇ ಇರುವುದು ಭಾರತ ಮತ್ತು ಅಮೆರಿಕದ ದ್ವಿಪಕ್ಷೀಯ ಬಾಂಧವ್ಯಕ್ಕೆ ಕೇಡು ಉಂಟುಮಾಡಲಿದೆ’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. 

ನಿರ್ಣಯದಲ್ಲೇನಿದೆ?: ‘ಬಂಧಿತರು ಹಾಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ದಬ್ಬಾಳಿಕೆ ಮಾಡದಂತೆ ಭಾರತ ಸರ್ಕಾ ರಕ್ಕೆ ಒತ್ತಾಯಿಸಲಾಗಿದ್ದು, ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗ ವಹಿಸಬಾರದು ಎಂಬ ಷರತ್ತು ವಿಧಿಸಿ ಬಿಡುಗಡೆ ಗೊಳಿಸಲಾಗುತ್ತಿದೆ ಎನ್ನುವುದಕ್ಕೆ ಪೂರಕ ಸಾಕ್ಷ್ಯಗಳಿವೆ’ ಎಂದು ತಿಳಿಸಲಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು