ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ಗೆ ವಾಗ್ದಂಡನೆ

Last Updated 19 ಡಿಸೆಂಬರ್ 2019, 19:44 IST
ಅಕ್ಷರ ಗಾತ್ರ

ವಾಷಿಂಗ್ಟನ್‌ :ಅಧಿಕಾರ ದುರ್ಬಳಕೆ ಹಾಗೂ ಸಂಸತ್‌ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಅಮೆರಿಕದ ಕೆಳಮನೆಯಲ್ಲಿ (ಹೌಸ್‌ ಆಫ್‌ ರೆಪ್ರಸೆಂಟೇಟಿವ್ಸ್‌) ಬುಧವಾರ ವಾಗ್ದಂಡನೆಗೆ ಗುರಿಪಡಿಸಲಾಯಿತು.

ಅಧಿಕಾರ ದುರ್ಬಳಕೆಗೆ ಸಂಬಂಧಿಸಿದ ವಾಗ್ದಂಡನೆಯನ್ನು 230–197 ಮತಗಳಿಂದ ಅಂಗೀಕರಿಸಲಾಯಿತು.

ಸಂಸತ್‌ ಕಾರ್ಯಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕೆ ಸಂಬಂಧಿಸಿ ಮಂಡನೆಯಾದ ವಾಗ್ದಂಡನೆ ಪರವಾಗಿ 229 ಹಾಗೂ ವಿರುದ್ಧವಾಗಿ 198 ಮತ ಬಿದ್ದವು. ಮುಂದಿನ ವರ್ಷ ಸೆನೆಟ್‌ನಲ್ಲಿ (ಮೇಲ್ಮನೆ) ವಾಗ್ದಂಡನೆ ಮಂಡನೆಯಾಗಲಿದ್ದು, ಇಲ್ಲಿಯೂ ವಾಗ್ದಂಡನೆ ಅಂಗೀಕಾರಗೊಂಡರೆ ಟ್ರಂಪ್‌ ಅಧಿಕಾರ ತ್ಯಜಿಸಬೇಕಾಗುತ್ತದೆ.

ಆದರೆ, 100 ಸದಸ್ಯರ ಸಂಖ್ಯಾಬಲದ ಸೆನೆಟ್‌ನಲ್ಲಿ ಆಡಳಿತಾರೂಢ ಪಕ್ಷವಾದ ರಿಪಬ್ಲಿಕನ್‌ ಪಾರ್ಟಿ ಸಂಸದರ ಸಂಖ್ಯೆಯೇ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT