ಮಂಗಳವಾರ, ಫೆಬ್ರವರಿ 18, 2020
30 °C

ಟರ್ಕಿಯಲ್ಲಿ ‌ಪ್ರಬಲ ಭೂಕಂಪ: 20 ಸಾವು, 600 ಮಂದಿಗೆ ಗಾಯ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

prajavani

ಇಸ್ತಾಂಬುಲ್‌: ಪೂರ್ವ ಟರ್ಕಿಯ ಎಲಾಜಿಂಗ್‌ ಪ್ರಾಂತ್ಯದಲ್ಲಿ ಶನಿವಾರ ಬೆಳಗ್ಗಿನ ಜಾವ ಭಾರೀ ಭೂಕಂಪ ಸಂಭವಿಸಿದ್ದು, 20 ಮಂದಿ ಸಾವಿಗೀಡಾಗಿದ್ದಾರೆ. 600 ಮಂದಿ ಗಾಯಗೊಂಡಿದ್ದಾರೆ.

ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ 6.7ರಷ್ಟು ದಾಖಲಾಗಿದೆ. ಪೂರ್ವ ಪ್ರಾಂತ್ಯದ ಸಿವ್ರೈಸ್‌ನಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪ ಕೇಂದ್ರ ಬಿಂದುವಿತ್ತು ಎಂದು ವಿಪತ್ತು ಮತ್ತು ತುರ್ತು ಪರಿಸ್ಥಿತಿ ನಿರ್ವಹಣಾ ಇಲಾಖೆ ತಿಳಿಸಿದೆ.

ಕಂಪನದ ತೀವ್ರತೆಗೆ ಹತ್ತಕ್ಕು ಹೆಚ್ಚು ಕಟ್ಟಡಗಳು ನೆಲಸಮವಾಗಿವೆ. ಕಟ್ಟಡ ಅವಶೇಷಗಳಡಿ ಸಿಲುಕಿರುವವರ ರಕ್ಷಣೆ ಕಾರ್ಯಾಚರಣೆ ಭರದಿಂದ ಸಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯ ಮುಂದುವರಿದಿದ್ದು, ಎಲಾಜಿಂಗ್ ನಗರದ 30 ಮಂದಿ ನಾಪತ್ತೆಯಾಗಿದ್ದಾರೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮೃತರಲ್ಲಿ 13 ಮಂದಿ ಎಲಾಜಿಂಗ್‌ ಪ್ರಾಂತ್ಯದವರು, ನಾಲ್ವರು ಮಾಲಟ್ಯ, ಇಬ್ಬರು ದಿಯರ್‌ಬಕೀನ್‌ನವರಾಗಿದ್ದಾರೆ. ರಾತ್ರಿ ವೇಳೆ ಇಲ್ಲಿನ ತಾಪಮಾನ ಶೂನ್ಯಕ್ಕೆ ತಲುಪುವುದರಿಂದ ತಾತ್ಕಲಿಕ ಟೆಂಟ್‌, ಹಾಸಿಗೆ, ರಗ್ಗುಗಳನ್ನು ಒದಗಿಸಲಾಗಿದೆ. ಮನೆಗಳಿಂದ ಹೊರಕ್ಕೆ ಓಡಿಬಂದ ಜನ, ಮೈಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಬೀದಿಗಳಲ್ಲಿ ಬೆಂಕಿ ಕಾಯಿಸಿಕೊಳ್ಳುತ್ತಿದ್ದಾರೆ.

ಈ ಹಿಂದೆ 1999ರಲ್ಲಿ ಪಶ್ಚಿಮ ಟರ್ಕಿಯಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿದ್ದು, 17 ಸಾವಿರಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದರು. 5 ಲಕ್ಷ ಮಂದಿ ನಿರಾಶ್ರಿತರಾಗಿದ್ದರು. ಇನ್ನು 2011ರಲ್ಲಿಯೂ ಪೂರ್ವ ಟರ್ಕಿಯ ವ್ಯಾನ್‌ ನಗರದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 500ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು.

 

‘ಭೂಕಂಪದಲ್ಲಿ ಜೀವಕಳೆದುಕೊಂಡವರಿಗೆ ದೇವರು ಕರುಣೆ ಸಿಗಲಿ ಮತ್ತು ಘಟನೆಯಲ್ಲಿ ಗಾಯಗೊಂಡರು ಶೀಘ್ರ ಚೇತರಿಸಿಕೊಳ್ಳಲಿ’ ಟರ್ಕಿ ಅಧ್ಯಕ್ಷ ರೆಸಿಪ್‌ ತಯ್ಯಿಪ್‌ ಎರ್ಡೊಗನ್‌ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು