ಮಂಗಳವಾರ, ಏಪ್ರಿಲ್ 7, 2020
19 °C

ಕೊಲಂಬೊ: ನಿಲ್ಲದ ಬಾಂಬ್ ದಾಳಿ, 8ನೇ ಬಾಂಬ್‍ ಸ್ಫೋಟದಲ್ಲಿ 3 ಸಾವು 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ: ಶ್ರೀಲಂಕಾದಲ್ಲಿ ಬಾಂಬ್ ದಾಳಿ ಇನ್ನೂ ನಿಂತಿಲ್ಲ. ಮಧ್ಯಾಹ್ನ ನಂತರ ಕೊಲಂಬೊದಲ್ಲಿ ಎರಡು ಕಡೆ ಬಾಂಬ್ ಸ್ಫೋಟ ಸಂಭವಿಸಿದೆ.

ಕೊಲಂಬೊದ ದೆಹಿವಲ ಎಂಬಲ್ಲಿ ಏಳನೇ ಬಾಂಬ್ ಸ್ಫೋಟ ಸಂಭವಿಸಿದ್ದು ಇದರಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಇಲ್ಲಿನ ಡೆಮಟಾಗೊಡ ಮಹವಿಲಾ ಗಾರ್ಡನ್‌ನಲ್ಲಿ ಸಂಭವಿಸಿದ ಎಂಟನೇ ಬಾಂಬ್ ಸ್ಫೋಟದಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಇದು ಆತ್ಮಾಹುತಿ ದಾಳಿ ಎಂದು ಎಎಫ್‍ಪಿ ವರದಿ ಮಾಡಿದೆ.

ಭಾನುವಾರ ಬೆಳಗ್ಗೆ ಕೊಲೊಂಬೊದಲ್ಲಿ 6 ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದು ಇಲ್ಲಿಯವರೆಗೆ 160 ಮಂದಿ ಸಾವಿಗೀಡಾಗಿದ್ದಾರೆ,. ದರಲ್ಲಿ 35 ಹೊರರಾಷ್ಟ್ರದವರಾಗಿದ್ದು, 500 ಮಂದಿಗೆ ಗಾಯಗಳಾಗಿವೆ.

ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ವರದಿ ಮಾಡಿದೆ. ಈ ಸರಣಿ ಬಾಂಬ್ ಸ್ಫೋಟದ ಹೊಣೆಯನ್ನು ಇಲ್ಲಿಯವರೆಗೆ ಯಾವುದೇ ಸಂಘಟನೆಗಳು ವಹಿಸಿಲ್ಲ. 

12 ಗಂಟೆಗಳ ಕರ್ಫ್ಯೂ
ಸರಣಿ ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಭಾನುವಾರ ಸಂಜೆ  6 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಹೇರಲಾಗಿದೆ.  ವಾಟ್ಸ್ಆ್ಯಪ್, ಫೇಸ್‌ಬುಕ್ ಮತ್ತು ವೈಬರ್ ಮೊದಲಾದ ಸಾಮಾಜಿಕ ಜಾಲತಾಣಗಳಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.

ಇದನ್ನೂ ಓದಿ

 * ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ: 160 ಸಾವು, 35 ಮಂದಿ ಹೊರ ರಾಷ್ಟ್ರದವರು

 * ಶ್ರೀಲಂಕಾದಲ್ಲಿ ಮತ್ತೊಂದು ಬಾಂಬ್ ಸ್ಫೋಟ: 2 ಸಾವು

* ಕೊಲಂಬೊ: ಸರಣಿ ಬಾಂಬ್ ಸ್ಫೋಟದಲ್ಲಿ ಕಾಸರಗೋಡು ನಿವಾಸಿ ಸಾವು

ಶ್ರೀಲಂಕಾ ಸ್ಫೋಟ: ಹತ್ತು ದಿನ ಹಿಂದೆಯೇ ಎಚ್ಚರಿಕೆ ನೀಡಿದ್ದ ಪೊಲೀಸ್ ಮುಖ್ಯಸ್ಥ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು