ಮಂಗಳವಾರ, ಮಾರ್ಚ್ 9, 2021
18 °C

ಕಿಟ್ ದೋಷದಿಂದ ಮೇಕೆಗೆ ಸೋಂಕು ದೃಢ!: ಕಿಟ್‌ಗಳನ್ನು ತಿರಸ್ಕರಿಸಿದ ತಾಂಜೆನಿಯಾ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ದಾರ್‌ ಎಸ್‌ ಸಲಾಂ: ತಾಂಜೆನಿಯಾದಲ್ಲಿ ವಿಭಿನ್ನ ಕಾರಣಕ್ಕೆ ಕೊರೊನಾ ವೈರಸ್‌ ಪತ್ತೆಗೆ ಬಳಸಲಾದ ಪರೀಕ್ಷಾ ಕಿಟ್‌ಗಳನ್ನು ದೋಷಪೂರಿತ ಎಂದು ಪರಿಗಣಿಸಿ ತಿರಸ್ಕರಿಸಲಾಗಿದೆ.

ಮೇಕೆ ಮತ್ತು ಪಪ್ಪಾಯಿ ರೀತಿಯ ಹಣ್ಣಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ವೈರಸ್‌ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ, ಈ ಕಿಟ್‌ಗಳು ತಾಂತ್ರಿಕವಾಗಿ ದೋಷಪೂರಿತವಾಗಿವೆ ಎಂದು ತಾಂಜೆನಿಯಾ ಅಧ್ಯಕ್ಷ ಜಾನ್‌ ಮಗುಫುಲಿ ತಿಳಿಸಿದ್ದಾರೆ.

‘ವಿದೇಶದಿಂದ ಈ ಕಿಟ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಈ ಕಿಟ್‌ಗಳ ಗುಣಮಟ್ಟ ಪರೀಕ್ಷಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಪಪ್ಪಾಯಿ ರೀತಿಯ ಹಣ್ಣುಗಳು, ಮೇಕೆ, ಕುರಿಗಳ ಮಾದರಿಗಳನ್ನು ಸಂಗ್ರಹಿಸಿ ಈ ಕಿಟ್‌ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಮಾದರಿಗಳ ಮೇಲೆ ಮನುಷ್ಯರ ಹೆಸರು ಮತ್ತು ವಯಸ್ಸು ನಮೂದಿಸಲಾಗಿತ್ತು. ಪ್ರಯೋಗಾಲಯದಲ್ಲಿ ತಾಂತ್ರಿಕ ಪರಿಣತರಿಗೆ ಈ ಬಗ್ಗೆ ಯಾವುದೇ ವಿಷಯ ಗೊತ್ತಿರಲಿಲ್ಲ. ಪಪ್ಪಾಯಿ ಮತ್ತು ಮೇಕೆಯ ಮಾದರಿಗಳಲ್ಲಿ ಕೊರೊನಾ ವೈರಸ್‌ ಇರುವುದು ದೃಢಪಟ್ಟಿತು’ ಎಂದು ಮಗುಫುಲಿ ವಿವರಿಸಿದ್ದಾರೆ.

‘ಸೋಂಕು ಕಾಣಿಸಿಕೊಳ್ಳದಿದ್ದರೂ ದೋಷಪೂರಿತ ಕಿಟ್‌ಗಳಿಂದ ದೃಢಪಡುತ್ತಿರುವುದು ವರದಿಯಾಗಿದೆ ಎನ್ನುವುದು ಈ ಪರೀಕ್ಷೆಗಳಿಂದ ಗೊತ್ತಾಗಿದೆ. ಹೀಗಾಗಿ, ಕಿಟ್‌ಗಳ ಬಗ್ಗೆ ಮೊದಲು ತನಿಖೆಯಾಗಬೇಕಾಗಿದೆ’ ಎಂದು ಹೇಳಿದ್ದಾರೆ.

ತಾಂಜೆನಿಯಾದಲ್ಲಿ ವೈರಸ್‌ ಸೋಂಕು ಹಬ್ಬಿರುವ ಸರ್ಕಾರ ಮಾಹಿತಿ ನೀಡುತ್ತಿಲ್ಲ ಎನ್ನುವ ಟೀಕೆಗಳು ವ್ಯಕ್ತವಾಗಿವೆ. ಭಾನುವಾರದವರೆಗೆ ತಾಂಜೆನಿಯಾದಲ್ಲಿ 480 ಪ್ರಕರಣಗಳು ಪತ್ತೆಯಾಗಿದ್ದವು ಮತ್ತು 17 ಮಂದಿಗೆ ದೃಢಪಟ್ಟಿದೆ. ಆಫ್ರಿಕಾದ ರಾಷ್ಟ್ರಗಳಲ್ಲಿ ಕಡಿಮೆ ಪ್ರಕರಣಗಳು ವರದಿಯಾಗಿದೆ. ಈ ರಾಷ್ಟ್ರಗಳಲ್ಲಿ ಪ್ರತಿ 10 ಲಕ್ಷ ಮಂದಿಯಲ್ಲಿ 500 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು