ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ನಕಲಿ ವಿಡಿಯೊ ಹಾವಳಿ ತಡೆಗಟ್ಟಲು ಫೇಸ್‌ಬುಕ್ ನೂತನ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ಆದರೆ, ಈ ನೀತಿಯಲ್ಲಿ ವಿಡಂಬನೆ ಮತ್ತು ವ್ಯಂಗ್ಯ ದಾಟಿಯ ವಿಡಿಯೊ ತುಣುಕುಗಳಿಗೆ ಯಾವುದೇ ನಿರ್ಬಂಧ ಇಲ್ಲ ಎಂದು ಮಂಗಳವಾರ ಸ್ಪಷ್ಟಪಡಿಸಿದೆ.

ಅವಾಸ್ತವಿಕವಾದ ಅತಿ ಸುಳ್ಳುಗಳಿಂದ ಕೂಡಿರುವ ವಿಡಿಯೊಗಳನ್ನು ಗುರುತಿಸಲು ‘ಕೃತಕ ಬುದ್ದಿಮತ್ತೆ’ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ ಮತ್ತು ಈ ಕಾರ್ಯಕ್ರಮದ ವಿನ್ಯಾಸವನ್ನು ಮನುಷ್ಯರ ನಡಾವಳಿಗಳನ್ನು ಅನುಸರಿಸಿ ರೂಪಿಸಲಾಗಿದೆ ಎಂದು ಹೇಳಿದೆ.

ಗುಣಮಟ್ಟದ ವಿಡಿಯೊಗಳು ಬಹುಪಾಲು ನಕಲಿತನವನ್ನು ಹೊಂದಿರುವುದಿಲ್ಲ. ಉತ್ತಮವಾಗಿ ಮೂಡಿಬರಲು ವಿಡಿಯೊ ರೂಪಿಸಿದವರು ಶ್ರಮಿಸಿರುತ್ತಾರೆ. ಆದರೆ, ನಕಲಿ ಅಥವಾ ಪ್ರಚೋದಿತ ವಿಡಿಯೊಗಳು ಗುಣಮಟ್ಟದ ಕೊರತೆಯನ್ನು ಹೊಂದಿರುತ್ತವೆ. ಅಲ್ಲದೆ, ಜನರನ್ನು ತಪ್ಪುದಾರಿಗೆ ಎಳೆದೊಯ್ಯುತ್ತವೆ ಎಂದು ವ್ಯಾಖ್ಯಾನಿಸಿದೆ.

ಹೊಸ ನೀತಿಯ ಅನುಷ್ಠಾನಕ್ಕೆ ಕೃತಕ ಬುದ್ಧಿಮತ್ತೆ ನೆರವಾಗಲಿದೆ. ಪರಿಣಾಮಕಾರಿ ಫಲಿತಾಂಶವನ್ನು ನೀಡುತ್ತದೆ ಎಂಬ ವಿಶ್ವಾಸವನ್ನು ಫೇಸ್‌ಬುಕ್ ಉಪಾಧ್ಯಕ್ಷೆ ಮೋನಿಕಾ ಬಿಕರ್ಟ್ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.