ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯಕಾರಿ ಕೊರೊನಾ ವೈರಸ್ ನೇಪಾಳದಲ್ಲಿ ಪತ್ತೆ: ಭಾರತದಲ್ಲಿ ಕಟ್ಟೆಚ್ಚರ

Last Updated 24 ಜನವರಿ 2020, 14:46 IST
ಅಕ್ಷರ ಗಾತ್ರ

ಕಠ್ಮಂಡು(ನೇಪಾಳ): ಚೀನಾದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿರುವ ಕೊರೊನಾ ವೈರಸ್ ಈಗ ನೇಪಾಳದಲ್ಲಿ ಪತ್ತೆಯಾಗಿದ್ದು, ಭಾರತವಿದೇಶಗಳಿಂದ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕೆಂದು ಆದೇಶಿಸಿದೆ.

ಚೀನಾದ ವುಹಾನ್‌ನಲ್ಲಿ ಮೊದಲು ಕಂಡು ಬಂದ ನ್ಯುಮೋನಿಯಾರೋಗ ಲಕ್ಷಣಗಳಿರುವ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡಿದ್ದು ಆರೋಗ್ಯಕ್ಕೆ ಸಂಬಂಧಿಸಿದಂತೆ ತುರ್ತುಪರಿಸ್ಥಿತಿ ಘೋಷಣೆ ಮಾಡುವ ಹಂತಕ್ಕೆ ತಲುಪಿದೆ.

ಚೀನಾದಿಂದ ನೇಪಾಳಕ್ಕೆ ಬಂದ ವಿದ್ಯಾರ್ಥಿಯೊಬ್ಬ ಅನಾರೋಗ್ಯ ಪೀಡಿತನಾಗಿದ್ದ, ಕೂಡಲೆ ಆತನಿಗೆ ರಕ್ತ ತಪಾಸಣೆ ಮಾಡಿಸಿದಾಗ ಕೊರೊನಾ ವೈರಸ್ ಇರುವುದು ಶುಕ್ರವಾರ ದೃಢಪಟ್ಟಿದೆ. ಈ ಕಾರಣದಿಂದಾಗಿ ನೇಪಾಳದ ಕಠ್ಮಂಡು ಸಂಪರ್ಕದಲ್ಲಿರುವ ಉತ್ತರ ಭಾರತದ ರಾಜ್ಯಗಳ ಜನರಲ್ಲಿ ಈಗ ಆತಂಕ ಮೂಡಿಸಿದೆ.

ಅಪಾಯಕಾರಿ ವೈರಸ್ ಆಗಿರುವ ಕೊರೊನಾ ಚೀನಾದ ವುಹಾನ್ ನಗರದಲ್ಲಿ ಕಳೆದ ಡಿಸೆಂಬರ್‌‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು. ಈಗ ಚೀನಾದಲ್ಲಿ ಸುಮಾರು 24 ಮಂದಿಯನ್ನು ಬಲಿತೆಗೆದುಕೊಂಡಿದೆ.ನಂತರ ಈ ವೈರಸ್ ಅಮೆರಿಕಾ, ಏಷ್ಯಾದ ಕೆಲ ನಗರಗಳು, ಚೀನಾದ ಇತರೆ ಭಾಗಗಳು, ದಕ್ಷಿಣ ಕೊರಿಯಾ, ಜಪಾನ್, ಥೈವಾನ್, ಥಾಯ್ಲೆಂಡ್ ದೇಶಗಳಲ್ಲಿ ಕಾಣಿಸಿಕೊಂಡಿದೆ.
ಅಂತರರಾಷ್ಟ್ರೀಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಚೀನಾದಲ್ಲಿ ಸಾರ್ವಜನಿಕ ಆರೋಗ್ಯ ಕುರಿತ ತುರ್ತುಪರಿಸ್ಥಿತಿ ಘೋಷಣೆಗೆ ಇದು ಸಕಾಲವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ನ್ಯುಮೋನಿಯಾಲಕ್ಷಣಗಳಿರುವ ಸುಮಾರು 830 ಪ್ರಕರಣಗಳು ಚೀನಾದಲ್ಲಿಪತ್ತೆಯಾಗಿವೆ. ಇವುಗಳಲ್ಲಿ 25 ಮಂದಿ ಮೃತಪಟ್ಟಿದ್ದಾರೆ ಎಂದು ಚೀನಾ ಮಾಧ್ಯಮ ವರದಿ ಮಾಡಿವೆ. ಉಳಿದ ಕೋರೋನಾ ವೈರಸ್ ಪೀಡಿತ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ ಎಂದುವರದಿಗಳು ತಿಳಿಸಿವೆ.ಎರಡನೆ ಪ್ರಕರಣ ಜಪಾನಿನಲ್ಲಿ ವ್ಯಕ್ತಿಯೊಬ್ಬರಿಗೆ ರಕ್ತ ಪರೀಕ್ಷಿಸಲಾಗಿ ಇದು ಕೂಡ ಕೊರೊನಾ ವೈರಸ್ ಎಂದು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT