ಈಜಿಪ್ಟ್‌ನ ಪದಚ್ಯುತ ಅಧ್ಯಕ್ಷ ಮೊಹಮ್ಮದ್ ಮುರ್ಸಿ ನಿಧನ

ಭಾನುವಾರ, ಜೂಲೈ 21, 2019
22 °C
ಕೋರ್ಟ್‌ನಲ್ಲಿ ಕುಸಿದು ಬಿದ್ದು ಸಾವು

ಈಜಿಪ್ಟ್‌ನ ಪದಚ್ಯುತ ಅಧ್ಯಕ್ಷ ಮೊಹಮ್ಮದ್ ಮುರ್ಸಿ ನಿಧನ

Published:
Updated:

ಕೈರೊ: ಈಜಿಪ್ಟ್‌ನ ಪದಚ್ಯುತ ಅಧ್ಯಕ್ಷ ಮೊಹಮ್ಮದ್ ಮುರ್ಸಿ (67) ನಿಧನರಾಗಿದ್ದಾರೆ.

ಅವರನ್ನು ಸೋಮವಾರ ವಿಚಾರಣೆಗೆ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಹೇಳಿಕೆ ನೀಡಿದ ಕೆಲವು ನಿಮಿಷಗಳ ನಂತರ ಅವರು ಕುಸಿದುಬಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ನಿಧನರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಸ್ಲಿಂ ಬ್ರದರ್‌ಹುಡ್ ಪಕ್ಷದ ನಾಯಕರಾಗಿರುವ ಮುರ್ಸಿ ಅವರನ್ನು 2013ರ ಜುಲೈನಲ್ಲಿ ಈಜಿಪ್ಟ್‌ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲಾಗಿತ್ತು. ಹಿಂಸಾಕೃತ್ಯದಲ್ಲಿ ತೊಡಗಿದ್ದಲ್ಲದೆ, ದೇಶದ ಅರ್ಥ ವ್ಯವಸ್ಥೆಗೆ ಹಾನಿಯುಂಟುಮಾಡಿದ ಆರೋಪಗಳಿಂದಾಗಿ ಅವರನ್ನು ಪದಚ್ಯುತಗೊಳಿಸಲಾಗಿತ್ತು. 2013ರಿಂದಲೂ ಮುರ್ಸಿ ಜೈಲಿನಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದರು.

2013ರಲ್ಲಿ ಮೊರ್ಸಿ ಬೆಂಬಲಿಗರು ಮತ್ತು ಸೇನೆಯ ನಡುವೆ ನಡೆದ ಘರ್ಷಣೆಯಲ್ಲಿ ನೂರಾರು ಜನ ಮೃತಪಟ್ಟಿದ್ದರು. ಅದಾದ ಬಳಿಕ ಈಜಿಪ್ಟ್‌ನಲ್ಲಿ ಹಿಂಸಾಚಾರ ತೀವ್ರಗೊಂಡಿತ್ತು. ಅಧ್ಯಕ್ಷ ಮೊರ್ಸಿ ಅವರನ್ನು ಪದಚ್ಯುತಗೊಳಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರದ ವಿವಿಧೆಡೆ ಲಕ್ಷಾಂತರ ಜನರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸೇನಾ ಆಡಳಿತ ಮೊರ್ಸಿ ಅವರನ್ನು ಪದಚ್ಯುತಗೊಳಿಸಿದ್ದಲ್ಲದೆ, ಬಂಧಿಸಿ ಅಜ್ಞಾತ ಸ್ಥಳದಲ್ಲಿರಿಸಿತ್ತು. ಬಳಿಕ, ಪೊಲೀಸರ ಹತ್ಯೆ ಮತ್ತು ವಿದ್ವಂಸಕ ಕೃತ್ಯ ಪ್ರಕರಣಕ್ಕೆ ಸಾಮೂಹಿಕ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮೊರ್ಸಿ ಅವರ 529 ಬೆಂಬಲಿಗರಿಗೆ ಮರಣದಂಡನೆ ವಿಧಿಸಿತ್ತು.

ಇನ್ನಷ್ಟು...

ಈಜಿಪ್ಟ್‌ನಲ್ಲಿ ಮತ್ತೆ ಹಿಂಸಾಚಾರ​

ಈಜಿಪ್ಟ್‌: 529 ಮೊರ್ಸಿ ಬೆಂಬಲಿಗರಿಗೆ ಗಲ್ಲು

ಅಜ್ಞಾತ ಸ್ಥಳದಲ್ಲಿ ಮೊರ್ಸಿ ತೀವ್ರ ವಿಚಾರಣೆ

ಹಾಜಿಮ್ ಈಜಿಪ್ಟ್ ಹೊಸ ಪ್ರಧಾನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !