ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ –19: ವುಹಾನ್‌ಗೆ ತಜ್ಞರು

ಹಡಗಿನಲ್ಲಿ ಸೋಂಕಿತ ಭಾರತೀಯರ ಸಂಖ್ಯೆ 12ಕ್ಕೆ ಏರಿಕೆ
Last Updated 25 ಫೆಬ್ರುವರಿ 2020, 4:18 IST
ಅಕ್ಷರ ಗಾತ್ರ

ಬೀಜಿಂಗ್, ಟೋಕಿಯೊ: ಚೀನಾದಲ್ಲಿ ಕೋವಿಡ್‌–19 ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 2,442ಕ್ಕೆ ಏರಿದ್ದು, ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ತಜ್ಞರ ತಂಡ ಹುಬೇ ಪ್ರಾಂತ್ಯದ ವುಹಾನ್ ನಗರಕ್ಕೆ ಭೇಟಿ ನೀಡಿದೆ.

ಈ ತಂಡದಲ್ಲಿ ಅಮೆರಿಕ, ಜರ್ಮನಿ, ಜಪಾನ್, ನೈಜೀರಿಯಾ, ರಷ್ಯಾ, ಸಿಂಗಪುರದ ತಜ್ಞರಿದ್ದಾರೆ ಎಂದು ಹಾಂಗ್‌ಕಾಂಗ್‌ನ ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಚಿಕಿತ್ಸೆ ನೀಡುವ ವೇಳೆ ಸಾವನ್ನಪ್ಪಿದ ವೈದ್ಯಕೀಯ ಕಾರ್ಯಕರ್ತರ ಸಂಖ್ಯೆ 10ಕ್ಕೆ ಏರಿದೆ. ಇದುವರೆಗೆ 1,716 ವೈದ್ಯಕೀಯ ಕಾರ್ಯಕರ್ತರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

12 ಭಾರತೀಯರಿಗೆ ಸೋಂಕು: ಜಪಾನಿನ ಯಾಕೊಹಾಮ ಬಂದರಿನಲ್ಲಿ ಲಂಗರು ಹಾಕಿರುವ ‘ಡೈಮಂಡ್ ಪ್ರಿನ್ಸೆಸ್’ ಹಡಗಿನಲ್ಲಿ ನಾಲ್ಕು ಮಂದಿಗೆ ಕೋವಿಡ್–19 ಸೋಂಕು ಪರೀಕ್ಷೆಯಿಂದ ದೃಢವಾಗಿದ್ದು, ಇದರಿಂದ ಸೋಂಕಿತ ಭಾರತೀಯರ ಸಂಖ್ಯೆ 12ಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT